ಸುದ್ದಿಮೂಲ ವಾರ್ತೆ
ಕೆಜಿಎಫ್, ಏ.15: ತಾಲ್ಲೂಕಿನ ದಿನೇ ದಿನೇ ಪಕ್ಷಾಂತರ ಪರ್ವಹೆಚ್ಚುತ್ತಲೇ ಇದೆ. ಆದೇ ರೀತಿ ಶಾಸಕಿ
ರೂಪಕಲಾ ಶಶಿಧರ್ ನೇತೃತ್ವದಲ್ಲಿ, ಟಿ ಗೊಲ್ಲಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕಳ್ಳಿಕುಪ್ಪ ಗ್ರಾಮದ
ಗ್ರಾ.ಪಂ.ಸದಸ್ಯ ವಿಜಯಲಕ್ಷ್ಮೀ, ಮುನಿಕೃಷ್ಣಪ್ಪ, ಮತ್ತು ನತ್ತ ನಾಗರಾಜ್, ಇತರೆ ಮುಖಂಡರು ಬಿ.ಜೆ.ಪಿ
ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಈ ವೇಳೆ ಮಾತನಾಡಿದ ಮುನಿಕೃಷ್ಣಪ್ಪ, ಶಾಸಕರು ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ಭ್ರಷ್ಟಚಾರ ಮಾಡಿಲ್ಲ. ಅಧಿಕಾರ ಮೋಹಕ್ಕೆ ಬೆಲೆಕೊಡದೆ ಅಭಿವೃದ್ದಿ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದನ್ನು ಮೆಚ್ಚಿ ಮುಂದಿನ ದಿನಗಳಲ್ಲಿ ನಮ್ಮ ಪಂಚಾಯಿತಿ ನಮ್ಮ ಗ್ರಾಮ ಇನ್ನಷ್ಟು ಅಭಿವೃದ್ಧಿಪಡಿಸಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ ಎಂದು ತಿಳಿಸಿದಿರು.
ಈ ವೇಳೆ ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ತಮ್ಮ ಮೇಲೆ ಹಾಗೂ ಪಕ್ಷದ ಮೇಲೆ ನಂಬಿಕೆಇಟ್ಟು ಪಕ್ಷಕ್ಕೆ
ಸೇರ್ಪಡೆಯಾದ ಮುನಿಕೃಷ್ಣಪ್ಪ ಹಾಗೂ ಇತರೆ ಮುಖಾಂಡರುಗಳಿಗೆ ಸ್ವಾಗತ. ಒಂದು ಗ್ರಾಮ ಅಂದಮೇಲೆ ಹಲವಾರು ಗುಂಪುಗಳು ಸಹಜ. ಕ್ಷೇತ್ರದಲ್ಲಿ ಕಳ್ಳಿಕುಪ್ಪ ಗ್ರಾಮದಲ್ಲಿ ರಾಜಕೀಯವಾಗಿರುವುದು ಒಂದೇ ಗುಂಪಾಗಿರುವುದು ಖುಷಿಯ ಸಂಗತಿ. ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರ ಅಭಿವೃದ್ದಿ ಕಡೆ ಹೆಚ್ಚು ಗಮನ ಕೊಡುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ.ಜಿ.ಪಂ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ಗ್ರಾ.ಪಂ.ಅಧ್ಯಕ್ಷ ಪವಿತ್ರ ಗೋಪಾಲ್, ಉಪಾಧ್ಯಕ್ಷ ಶ್ರೀರಾಮಪ್ಪ, ಸೋಸೈಟಿ ಅಧ್ಯಕ್ಷ ಕಾರಿ ಪ್ರಸನ್ನ, ಮಾಜಿ ಅಧ್ಯಕ್ಷರಾದ ವೆಂಕಟಚಲಪತಿ, ಶಂಕರ್, ಗ್ರಾ.ಪಂ.ಸದಸ್ಯರುಗಳಾದ ನಾರಾಯಣಸ್ವಾಮಿ, ಗೋಪಿ, ಸುರೇಂದ್ರ ಗೌಡ, ವಿನೂ ಕಾರ್ತಿಕ್, ಒ.ಬಿ.ಸಿ ಮುನಿಸ್ವಾಮಿ, ನೂರಾರು ಕಾರ್ಯಕರ್ತರು ಹಾಜರಿದರು.