ಸುದ್ದಿಮೂಲ ವಾರ್ತೆ
ಆನೇಕಲ್, ಏ.17: ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ಜೈ ಭೀಮ ಐಕ್ಯತೆ ವೇದಿಕೆ ವತಿಯಿಂದ 132ನೇ ಅಂಬೇಡ್ಕರ್ ಜಯಂತಿ ಅಂಗವಾಗಿ ಇಂದು ರಾಮಕುಟೀರದಲ್ಲಿ ದೇಹದಾರ್ಡ್ಯ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ರಾಯಲ್ ಫಿಟ್ನೆಸ್ ಮಿಸ್ಟರ್ ಜೈ ಭೀಮ್ ಶೀರ್ಷಿಕೆ ಅಡಿಯಲ್ಲಿ ಬಾಡಿ ಬಿಲ್ಡರ್ಗಳು ತಮ್ಮ ದೇಹ ಪ್ರದರ್ಶನ ಮಾಡಿದರು. ತೀರ್ಪುಗಾರರಾಗಿ ಪ್ರಕಾಶ್ ಹಾಗೂ ಆನೇಕಲ್ ವಸಂತ್ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾವಣ ಮಾತನಾಡಿ, ಬಾಬಾ ಸಾಹೇಬರ ಜನ್ಮ ದಿನೋತ್ಸವವನ್ನು ಇಡೀ ವಿಶ್ವವೇ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದೆ. ಆದರೆ ನಮ್ಮ ಭಾರತದಲ್ಲಿ ಜಾತಿ ವ್ಯವಸ್ಥೆಯಿಂದ ಅಂತ ಮಹಾನ್ ವ್ಯಕ್ತಿಗೆ ಗೌರವ ಸಿಗುತ್ತಿಲ್ಲ. ಬಾಬಾ ಸಾಹೇಬರ ಕನಸು ಸರ್ವರಿಗೂ ಸಮಪಾಲು ಸಮಾನತೆ ಹಕ್ಕು ಕೊಟ್ಟವರು ಎಂದು ಹೇಳಿದರು.
ಬಾಬಾ ಸಾಹೇಬರ ಕನಸು ಶೇ.52 ರಷ್ಟು ಮೀಸಲಾತಿ ಕೊಡಬೇಕಾಗಿತ್ತು. ಆದರೆ ಹಿಂದುಳಿದ ವರ್ಗಕ್ಕೆ ಶೇ.27 ನೀಡಿ ಅನ್ಯಾಯ ಮಾಡುತ್ತಿದ್ದಾರೆ. ಈ ದೇಶ ಹಸಿವು ಮುಕ್ತ ರಾಷ್ಟ್ರ ಆಗಬೇಕು, ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು. ಆಗ ಮಾತ್ರ ಅಂಬೆಡ್ಕರ್ ದಿನಾಚರಣೆ ಅರ್ಥಪೂರ್ಣ ಎಂದರು.
ಇನ್ನು ದಲಿತ ಪರ ಸಂಘಟನೆ ಒಕ್ಕೂಟದ ಹೋರಾಟಗಾರ್ತಿ ತ್ರಿಪುರ ಸುಂದರಿ ಮಾತನಾಡಿ, ಇತ್ತೀಚಿನ ಯುವಕರು ಮದ್ಯವ್ಯಸನ ದಾಸರಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೆಲ ಯುವಕರು ದುಶ್ಚಟಗಳಿಂದ ದೂರಾಗಲು ಬಾಡಿ ಬಿಲ್ಡರ್ ಹಾಗೂ ಮತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಜಿಮ್ ಗೆ ಹೋಗಿ ಆರೋಗ್ಯ ವೃದ್ಧಿಸಿಕೊಳ್ಳುತ್ತಿರುವುದು ದೇಶವನ್ನು ಮುನ್ನಡೆಸುವುದಕ್ಕೆ ಸಹಕಾರಿ ಆಗಲಿದೆ ಎಂದರು.
ಇನ್ನೂ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಮೊದಲನೇಯ ಬಹುಮಾನವನ್ನು ನಾಗಾರ್ಜುನ್ ಅವರಿಗೆ, ಬೊಮ್ಮಸಂದ್ರ ಮುಜಾಮಿನ್ ಈಗಲ್ ಫಿಟ್ನೆಸ್ ಬೆಸ್ಟ್ ಪೋಸ್ ಅವಾರ್ಡ್ 47 ವರ್ಷದ ಅತ್ತಿಬೆಲೆ ಸುರೇಶ್ ಅವರಿಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ‘ಅಂಬೇಡ್ಕರ್ ವರ್ತಮಾನ ಮುನ್ನೋಟ’ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.