ಸುದ್ದಿಮೂಲ ವಾರ್ತೆ
ಸೂಲಿಬೆಲೆ, ಏ.17: ವಿಧಾನಸಭಾ ಚುನಾವಣೆಯಲ್ಲಿ ಸಾರ್ವಜನಿಕರು ಯಾವುದೇ ರೀತಿಯ
ಗೊಂದಲಗಳಿಗೆ ಒಳಗಾಗದೆ ಭಯಮುಕ್ತರಾಗಿ ಚುನಾವಣೆ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಿ ಎಂದು ಸೂಲಿಬೆಲೆ ಠಾಣಾ ಇನ್ಸ್ಪೆಕ್ಟರ್ ಕೆ.ರವಿ ಹೇಳಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಕಾರ್ಯಕ್ರಮದಡಿಯಲ್ಲಿ ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿನ ಹಳ್ಳಿಗಳಿಗೆ ಅರೆಮಿಲಟರಿ ಪಡೆಯೊಂದಿಗೆ ಪಥಸಂಚಲನ ನೆಡೆಸಿ
ಮಾತನಾಡಿದರು.
ಭಯಮುಕ್ತವಾದ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಸಾರ್ವಜನಿಕರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಈ ಅರೆಮಿಲಟರಿ ಪಡೆ ಮತ್ತು ಸೂಲಿಬೆಲೆ ಪೋಲಿಸ್ ಠಾಣೆ ಸಂಯುಕ್ತ ಆಶ್ರಯದಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿದ್ದು ಯಾವುದೇ ರೀತಿಯ ಅಕ್ರಮಗಳು ಕಂಡುಬಂದಲ್ಲಿ ನಮ್ಮಲ್ಲಿ ಇಲ್ಲವೇ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು ಎಂದು ಹೇಳಿದರು.
ಸೂಲಿಬೆಲೆ ಪೋಲಿಸ್ ಠಾಣಾ ಸರಹದ್ದಿನ ಸೂಲಿಬೆಲೆ,ಚಿಕ್ಕಹರಳಗೆರೆ, ಬೆಂಡಿಗಾನಹಳ್ಳಿ, ತೆನೆಯೂರು, ತಿಮ್ಮಪ್ಪನಹಳ್ಳಿ, ಅನುಪಹಳ್ಳೀ,ದ್ಯಾವಸಂದ್ರ, ಟಿ.ಅಗ್ರಹಾರ, ದೊಡ್ಡಅರಳಗೆರೆ, ತಮ್ಮರಸನಹಳ್ಳಿ, ಬೆಟ್ಟಹಳ್ಳಿ, ಗಿಡ್ಡಪ್ಪನಹಳ್ಳಿ, ಬೆಗೂರು ಗ್ರಾಮಗಳಲ್ಲಿ ಬಿಎಸ್ಎಫ್ ತುಕಡಿಯೊಂದಿಗೆ ಸಾರ್ವಜನಿಕರಲ್ಲಿ ಭಯಮುಕ್ತ ವಾತಾರಣ ನಿರ್ಮಾಣಮಾಡುವುದು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸುವ ಕಾರ್ಯಕ್ರಮ
ಯಶಸ್ವಿಯಾಗಿದೆ ಎಂದರು.
ಸಹಾಯಕ ಸಬ್ಇನ್ಸ್ಪೆಕ್ಟರ್ ನಟರಾಜಮೂರ್ತಿ, ನಾರಾಯಣಸ್ವಾಮಿ, ಸಂತೋಷ್, ಅಸ್ಕಿ,ಸಿದ್ದಪ್ಪ, ಅರೆಮಿಲಟರಿ ಪಡೆಯ ಅಧಿಕಾರಿಗಳಾದ ಸಹಾಯಕ ಕಮಾಂಡೆಂಟ್ ಕಿಷನ್ನಾಥ್, ಇನ್ಸ್ಪೆಕ್ಟರ್ ಲಲಿತ್ಕುಮಾರ್, ಮಣಿಪಾಲ್ ಸಿಂಗ್, ಜಿ.ಡಿ.ಪತಾರ್, ಕೃಷ್ಣಚಾಂದ್, ಎಂ.ಡಿ.ಮುರಾಸಲಿನ್, ಇತರರು
ಇದ್ದರು.