ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಏ 17: ಮಹದೇವಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿತ್ತಿರುವ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಎಚ್.ನಾಗೇಶ್ ಅವರನ್ನು ಭೀಮ್ ರಾವ್ ಅಂಬೇಡ್ಕರ್ ಸಂಘಟನೆಗಳ ಮಹಾ ಒಕ್ಕೂಟದ ಹದಿನಾಲ್ಕು ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಬೆಂಬಲ ಸೂಚಿಸಿದರು.
ವೈಟ್ ಫೀಲ್ಡ್ ನ ವಿಜಯನಗರದ ಮುಖ್ಯರಸ್ತೆ ಸಮೀಪದ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎಂ.ವೆಂಕಟೇಶ್ ಮಾತನಾಡಿ, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮೀಸಲು ಕ್ಷೇತ್ರದಿಂದ ಗೆದ್ದು ಬರುತ್ತಿರುವ ಶಾಸಕ ಅರವಿಂದ ಲಿಂಬಾವಳಿ ಅವರು ದಲಿತರ ಸರ್ವಾಂಗೀಣ ಅಭಿವೃದ್ಧಿ ಮಾಡದೆ ಮುಂದುವರೆದ ಜಾತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ದಲಿತರು ವಾಸಿಸುತ್ತಿರುವ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳ ಕಲ್ಪಿಸಿಲ್ಲ, ಈವರಗೂ ಬಡವರಿಗೆ ಹಕ್ಕು ಪತ್ರಗಳ ವಿತರಣೆ ಮಾಡಿಲ್ಲ. ಯಾವುದೇ ಸರ್ಕಾರದ ಸವಲತ್ತುಗಳನ್ನು ಒದಗಿಸಿಲ್ಲ ಎಂದು ಆರೋಪಿಸಿದರು.
ಮಹಾ ಒಕ್ಕೂಟದ ಕಾರ್ಯಾಧ್ಯಕ್ಷ ಬೆಳತ್ತೂರು ವೆಂಕಟೇಶ್ ಮಾತನಾಡಿ, ಮಹದೇಪುರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಎರಡು ಲಕ್ಷಕ್ಕೂ ಅಧಿಕ ಮತಗಳಿದ್ದು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭೀಮರಾವ್ ಅಂಬೇಡ್ಕರ್ ಸಂಘಟನೆಗಳ ಮಹಾ ಒಕ್ಕೂಟವು ದಲಿತ ಪರವಾಗಿರುವ ಹಾಗೂ ಸ್ಥಳೀಯರಾಗಿರು ಹೆಚ್ ನಾಗೇಶ್ ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತದೆ. ಅಭ್ಯರ್ಥಿ ಭವಿಷ್ಯ ನಿರ್ಧಾರ ಬದಲಿಸುವ ಸಮ್ಯರ್ಥ ಹೊಂದಿರುವ ದಲಿತರನ್ನು ಕಡೆಗಣಿಸಲಾಗುತ್ತ ಬರಲಾಗುತ್ತಿದೆ. ದಲಿತರ ಏಳಿಗೆಗಾಗಿ ಶ್ರಮಿಸದ ಬಿಜೆಪಿ ಅಭ್ಯರ್ಥಿಯನ್ನು ನಾವು ಬೆಂಬಲಿಸುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಎಚ್.ನಾಗೇಶ್ ಅವರಿಗೆ 14 ಸಂಘಟನೆಗಳಿಂದ ಬೆಂಬಲಿಸಲು ತೀರ್ಮಾನ ಮಾಡಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ರಾಜು ದಿನ್ನೂರು, ಖಜಾಂಚಿ ಎಂ ವೆಂಕಟರಾಜು, ಪ್ರಧಾನ ಕಾರ್ಯದರ್ಶಿಗಳಾದ ಎಂ ಕೃಷ್ಣಪ್ಪ, ಆರ್.ಕಿರಣ್ ಕುಮಾರ್,ಮುಳ್ಳೂರು ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಎಸ್ ವೆಂಕಟೇಶ್, ಪಿ. ರಾಜಣ್ಣ, ಎಂ.ಜಿ.ನಾಗರಾಜ್, ವೆಂಕಟೇಶ್, ಮಂಜುನಾಥ್ ಇದ್ದರು.
ಚಿತ್ರ ಶೀರ್ಷಿಕೆ:
ಪತ್ರಿಕಾಗೋಷ್ಠಿಯಲ್ಲಿ ಭೀಮ್ ರಾವ್ ಅಂಬೇಡ್ಕರ್ ಸಂಘಟನೆಗಳ ಮಹಾ ಒಕ್ಕೂಟದ ಹದಿನಾಲ್ಕು ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಬೆಂಬಲ ಪತ್ರ ಪ್ರದರ್ಶಿಸಿದರು.