ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.19: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನೀಡಿರುವ ಮತದಾನ ಹಕ್ಕು ಬಳಸಿ ಈ ಬಾರಿ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗೆ ಮತ ಹಾಕಬೇಕು. ಯಾವ ಕಾರಣಕ್ಕೂ ತಮ್ಮ ಮತ ಮಾರಾಟ ಮಾಡಿಕೊಳ್ಳಬೇಡಿ ಎಂದು ಈ ಧರೆ ಸಮತಾ ಸೇನೆಯ ಸಂಸ್ಥಾಪಕ ಈ ಧರೆ ಪ್ರಕಾಶ್ ಹೇಳಿದರು.
ತಾಲ್ಲೂಕಿನ ಹುಜುಗೂರು ಗ್ರಾಮದಲ್ಲಿ ಜ್ಯೋತಿ ಬೆಳಗಿಸಿ ಕೇಕ್ ಕತ್ತರಿಸುವ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ರವರ 132 ನೇ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ನೃತ್ಯಗಳು ಹಾಗೂ ಕಿರು ನಾಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶತಮಾನಗಳಿಂದ ಶೋಷಣೆಗೆ ದೂಡಲ್ಪಟ್ಟಿದ್ದ ತಳ ಸಮುದಾಯಗಳ ಜನತೆಗೆ ಅಸ್ಪಶ್ಯತೆಯ ಹಣೆಪಟ್ಟಿ ಕಟ್ಟಿ ಅನೇಕ ಮೌಡ್ಯ ಸಂಪ್ರದಾಯಗಳು ಹೇರಿ ಊರು ಕೇರಿಗಳಲ್ಲಿ ಜನರನ್ನು ಬದುಕಲು ಬಿಡದಂತೆ ಮಾಡಲಾಗಿತ್ತು. ಇಂತಹ ಅನಾಗರಿಕ ಸಮಾಜದಲ್ಲಿ ನೊಂದ ಜನತೆಗೆ ಶ್ರೀರಕ್ಷೆಯಾಗಿ ಬಡವನು ಶ್ರೀಮಂತನಷ್ಟೇ ಸಮವಾದ ವ್ಯಕ್ತಿ ಎನ್ನುವ ಧ್ಯೇಯವನ್ನು ಸಂವಿಧಾನ ಮೂಲಕ ಮತದಾನದ ಹಕ್ಕು ನೀಡಿದವರು ಅಂಬೇಡ್ಕರ್ ಎಂದರು.
ಭಾವೈಕ್ಯತೆಯಿಂದ ಕೂಡಿರುವಂತ ಬಹು ಸಂಸ್ಕೃತಿಗಳ ನೆಲೆಗಟ್ಟನ್ನು ನೀಡಿದ ಡಾ. ಬಿ. ಆರ್ ಅಂಬೇಡ್ಕರ್ ರವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವುದು ಶೋಷನೀಯ ಸಂಗತಿಯಾಗಿದೆ. ಸಾವಿರಾರು ಜಾತಿಗಳುಳ್ಳ ಸರ್ವಧರ್ಮಗಳು ಐಕ್ಯತೆಯಿಂದ ಕೂಡಿರುವಂತ ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಆರ್ ಎಂ ಪಿ ಯು ಕಾಲೇಜ್ ಪ್ರಾಂಶುಪಾಲ ಡಾ. ಕೆ. ಮೂರ್ತಿ ಸಾಮ್ರಾಟ್, ಗ್ರಾಮದ ಹಿರಿಯ ಮುಖಂಡರಾದ ವೆಂಕಟರಾಯಪ್ಪ, ಮುನಿಶಾಮಪ್ಪ, ಯುವ ಮುಖಂಡ ಶಿವರಾಜ್, ಈ ಧರೆ ಸಮತಾ ಸೇನೆ ಕಾರ್ಯದರ್ಶಿ ಬೈರನಾಯಕನಹಳ್ಳಿ ನರಸಿಂಹಪ್ಪ, ಶ್ರೀನಿವಾಸ್, ಸುಬ್ರಮಣಿ, ಮಲ್ಲಿಕಾ, ಮುನೀಂದ್ರ ಕುಮಾರ್, ಪ್ರಭು, ಮಹೇಶ್, ಪ್ರವೀಣ್ ಕುಮಾರ್, ಗಿರೀಶ್, ವರಚಂದ್ರ, ಅಶೋಕ್, ವಿನೇಶ್, ಕಿಮಾರ್, ನವೀನ್, ನಾಗಾರ್ಜುನ್, ಮೂರ್ತಿ, ಹರೀಶ್, ನಾಗೇಶ್, ಮಣಿ, ಗೊರಡಗು ಲೋಕೇಶ್ ಹಾಗೂ ಮುಂತಾದವರು ಭಾಗವಹಿಸಿದ್ದರು.