ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.21; ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಶೇ. 74.67 ರಷ್ಟು ವಿದ್ಯಾರ್ಥಿಗಳು ದಾಖಲೆ ಪ್ರಮಾಣದಲ್ಲಿ ತೇರ್ಗಡೆಯಾಗಿದ್ದಾರೆ. ಎಂದಿನಂತೆ ಬಾಲಕಿಯರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದು, ಹಳ್ಳಿ ಹೈಕಳು ಉತ್ತಮ ಸಾಧನೆ ಮಾಡಿದ್ದಾರೆ.
ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಅಧ್ಯಕ್ಷ ಎಸ್. ರಾಮಚಂದ್ರನ್ ಅವರು ಫಲಿತಾಂಶ ಪ್ರಕಟಿಸಿದರು.
ಈ ವರ್ಷ ಒಟ್ಟಾರೆ 7,02,067ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಒಟ್ಟಾರೆ ಶೇಕಡಾವಾರು 74.67 ರಷ್ಟು ಫಲಿತಾಂಶ ಬಂದಿದೆ ಎಂದರು.ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದ ಪ್ರಮಾಣ ಏರಿಕೆಯಾಗಿದ್ದು, ಕಳೆದ ವರ್ಷ ಶೇ. 61.88 ರಷ್ಟು ಫಲಿತಾಂಶ ಬಂದಿತ್ತು.
ಕಲಾ ವಿಭಾಗದಲ್ಲಿ ಶೇ.61.22ವಿಜ್ಞಾನ ವಿಭಾಗದಲ್ಲಿ ಶೇ 85.71 ವಾಣಿಜ್ಯ ವಿಭಾಗದಲ್ಲಿ ಶೇ. 75.89 ರಷ್ಟು ಫಲಿತಾಂಶ ಬಂದಿದೆ ಎಂದು ಅವರು ಹೇಳಿದರು.
ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಬಾಲಕಿಯರ ಉತ್ತೀರ್ಣದ ಪ್ರಮಾಣ ಶೇ. 80.25 ರಷ್ಟಿದ್ದರೆ, ಬಾಲಕರ ಉತ್ತೀರ್ಣದ ಪ್ರಮಾಣ ಶೇ. 69.05 ರಷ್ಟಿದೆ ಎಂದು ಅವರು ತಿಳಿಸಿದರು.ಈ ವರ್ಷ ಕಲಾವಿಭಾಗದಲ್ಲಿ 220.35 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದ್ದು, 1,34,876 ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ. 61.22 ರಷ್ಟು ಫಲಿತಾಂಶ ಕಲಾವಿಭಾಗದಲ್ಲಿ ಬಂದಿದೆ.ವಾಣಿಜ್ಯ ವಿಭಾಗದಲ್ಲಿ 2,40,146 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಇವರಲ್ಲಿ 1,82,246 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 75.89 ರಷ್ಟು ಫಲಿತಾಂಶ ವಾಣಿಜ್ಯ ವಿಭಾಗದಲ್ಲಿ ಬಂದಿದೆ.ವಿಜ್ಞಾನ ವಿಭಾಗದಲ್ಲಿ 2,41,616 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 2,07,087 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 85.71 ಲಕ್ಷ ಬಂದಿದ್ದು, ಒಟ್ಟಾರೆ ಶೇ. 74.67 ರಷ್ಟು ಫಲಿತಾಂಶ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಂದಿದೆ ಎಂದರು.ಈ ವರ್ಷ, 69.870 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 33,833 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಖಾಸಗಿಯಾಗಿ 24,708 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,630 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಈ ವರ್ಷ ಉನ್ನತ ಶ್ರೇಣಿಯಲ್ಲಿ ಅಂದರೆ ಶೇ. ೮೫ಕ್ಕಿಂತ ಹೆಚ್ಚು ಅಂಕವನ್ನು 1,09,509 ವಿದ್ಯಾರ್ಥಿಗಳು ಪಡೆದಿದ್ದು, ಪ್ರಥಮ ದರ್ಜೆ ಅಂದರೆ ಶೇ. ೮೫ಕ್ಕಿಂತ ಕಡಿಮೆ ಹಾಗೂ ಶೇ. 60 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 2,047.315 ದ್ವಿತೀಯ ದರ್ಜೆ ಶೇ. 60 ಕ್ಕಿಂತ ಕಡಿಮೆ ಶೇ50 ೦ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 90,014 ಆಗಿದೆ.ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ 77,371,
ಈ ವರ್ಷ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತೀರ್ಣತೆ ಪ್ರಮಾಣ ಶೇ. 63.68 ರಷ್ಟಿದ್ದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ. 2.30.
ಗ್ರಾಮೀಣರೇ ಮೇಲುಗೈ
ಈ ವರ್ಷದ ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದು, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ. 74.79 ರಷ್ಟಿದ್ದರೆ, ನಗರ ಪ್ರದೇಶದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ. 74.63 ರಷ್ಟಿದೆ ಎಂದರು.
ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು 65 ಕೇಂದ್ರಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆ ಮಾ. 9 ರಿಂದ ಮಾ. 29 ರವರೆಗೂ ನಡೆದಿತ್ತು. ಮೌಲ್ಯಮಾಪನ ಏ. 5 ರಿಂದ ಏ. 15 ರವರೆಗೂ ನಡೆದಿದ್ದು, ಒಟ್ಟು 23,606 ಮೌಲ್ಯಮಾಪನ ಕಾರ್ಯ ನಡೆಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆ ಮೇಲುಗೈ
ಕಳೆದ ವರ್ಷದಂತೆ ಈ ವರ್ಷವು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 95.33 ರಷ್ಟು ಫಲಿತಾಂಶ ಪಡೆದಿದೆ.
ಕಳೆದ ವರ್ಷದಂತೆ ಈ ವರ್ಷವೂ ಉಡುಪಿ 2ನೇ ಸ್ಥಾನದಲ್ಲಿದ್ದು, ಶೇ. 95.24 ರಷ್ಟು, ಕೊಡಗು ೩ನೇ ಸ್ಥಾನದಲ್ಲಿದ್ದು, ಶೇ. 90.55 ರಷ್ಟು ಫಲಿತಾಂಶ ಪಡೆದುಕೊಂಡಿದೆ.ಉತ್ತರ ಕನ್ನಡ ಜಿಲ್ಲೆ 4ನೇ ಸ್ಥಾನದಲ್ಲಿದ್ದು, ಶೇ. 89.74ರಷ್ಟು ಫಲಿತಾಂಶ ಪಡೆದುಕೊಂಡಿದೆ. ವಿಜಯಪುರ ಫಲಿತಾಂಶದಲ್ಲಿ 5ನೇ ಸ್ಥಾನದಲ್ಲಿದ್ದು, ಶೇ.84.69ರಷ್ಟು ಫಲಿತಾಂಶ ಬಂದಿದೆ.
100ಕ್ಕೆ 100ರಷ್ಟು ಅಂಕ
ಈ ವರ್ಷದ ಪರೀಕ್ಷೆಯಲ್ಲಿ ಕನ್ನಡದಲ್ಲಿ 1083 ವಿದ್ಯಾರ್ಥಿಗಳು 100 ಕ್ಕೆ 1೦೦ ರಷ್ಟು ಅಂಕ ಪಡೆದಿದ್ದು, ಇಂಗ್ಲೀಷ್ನಲ್ಲಿ ಇಬ್ಬರು ವಿದ್ಯಾರ್ಥಿಗಳು 1೦೦ಕ್ಕೆ 1೦೦ ಅಂಕ, ಹಿಂದಿಯಲ್ಲಿ 33 ವಿದ್ಯಾರ್ಥಿಗಳು, ಸಮಾಜ ಶಾಸ್ತ್ರದಲ್ಲಿ 275 ವಿದ್ಯಾರ್ಥಿಗಳು, ರಾಜ್ಯಶಾಸ್ತ್ರದಲ್ಲಿ 218 ವಿದ್ಯಾರ್ಥಿಗಳು, ವ್ಯವಹಾರ ಅಧ್ಯಯನದಲ್ಲಿ 2,288 ವಿದ್ಯಾರ್ಥಿಗಳು, ಇತಿಹಾಸದಲ್ಲಿ 274 ವಿದ್ಯಾರ್ಥಿಗಳು, ಅರ್ಥಶಾಸ್ತ್ರದಲ್ಲಿ 1414 ವಿದ್ಯಾರ್ಥಿಗಳು, ಹಿಂದೂಸ್ಥಾನಿ ಸಂಗೀತದಲ್ಲಿ 28 ವಿದ್ಯಾರ್ಥಿಗಳು, ಸಂಸ್ಕೃತದಲ್ಲಿ 1,250 ವಿದ್ಯಾರ್ಥಿಗಳು, ಉರ್ದುವಿನಲ್ಲಿ 28 ವಿದ್ಯಾರ್ಥಿಗಳು, ಲೆಕ್ಕಶಾಸ್ತ್ರದಲ್ಲಿ 475 ವಿದ್ಯಾರ್ಥಿಗಳು, ಸಂಖ್ಯಾಶಾಸ್ತ್ರದಲ್ಲಿ 1627 ವಿದ್ಯಾರ್ಥಿಗಳು, ಮನಃಶಾಸ್ತ್ರದಲ್ಲಿ 95 ವಿದ್ಯಾರ್ಥಿಗಳು, ಭೌತಶಾಸ್ತ್ರದಲ್ಲಿ 1599, ರಸಾಯನಶಾಸ್ತ್ರದಲ್ಲಿ 324 ವಿದ್ಯಾರ್ಥಿಗಳು, ಗಣಿತಶಾಸ್ತ್ರದಲ್ಲಿ 2704 ಜೀವಶಾಸ್ತ್ರದಲ್ಲಿ 997, ಎಲೆಕ್ಟ್ರಾನಿಕ್ಸ್ನಲ್ಲಿ 336 ಗಣಕ ವಿಜ್ಞಾನದಲ್ಲಿ ೫೩೩೫ ವಿದ್ಯಾರ್ಥಿಗಳು, ಶಿಕ್ಷಣದಲ್ಲಿ 429, ಬೇಸಿಕ್ ಮ್ಯಾಥ್ಸ್ನಲ್ಲಿ 533, ಮಾಹಿತಿ ತಂತ್ರಜ್ಞಾನದಲ್ಲಿ 7, ಆಟೋಮೊಬೈಲ್ನಲ್ಲಿ 20, ಗೃಹ ವಿಜ್ಞಾನದಲ್ಲಿ 24 ವಿದ್ಯಾರ್ಥಿಗಳು, ಭೂಗೋಳ ಶಾಸ್ತ್ರದಲ್ಲಿ 780, ತರ್ಕಶಾಸ್ತ್ರದಲ್ಲಿ 8 ಐಚ್ಛಿಕ ಕನ್ನಡ 5 ಫ್ರೆಂಚ್ನಲ್ಲಿ 45 ವಿದ್ಯಾರ್ಥಿಗಳು 100ಕ್ಕೆ 100 ರಷ್ಟು ಅಂಕ ಪಡೆದಿದ್ದಾರೆ. ಶೇ. 100 ರಷ್ಟು ಫಲಿತಾಂಶ ಸರ್ಕಾರಿ ಕಾಲೇಜುಗಳೇ ಮುಂದು
ಈ ಬಾರಿಯ ಫಲಿತಾಂಶದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 63.53 ರಷ್ಟು ಫಲಿತಾಂಶ ಬಂದಿದ್ದು, ಅನುದಾನಿತ ಪ.ಪೂ. ಕಾಲೇಜುಗಳಲ್ಲಿ ಶೇ. 71.23 ಫಲಿತಾಂಶ, ಅನುದಾನ ರಹಿತ ಕಾಲೇಜುಗಳಲ್ಲಿ ಶೇ. 83.71, ಕಾರ್ಪೋರೇಷನ್ ಪ.ಪೂ. ಕಾಲೇಜುಗಳಲ್ಲಿ ಶೇ. 56.05, ವಿಭಜಿತ ಪ.ಪೂ. ಕಾಲೇಜುಗಳಲ್ಲಿ ಶೇ. 80.06 ರಷ್ಟು ಫಲಿತಾಂಶ ಬಂದಿದೆ ಎಂದು ಅವರು ವಿವರಿಸಿದರು.
ರಾಜ್ಯದ 42 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದೆ. 10 ಅನುದಾನಿತ ಪ.ಪೂ. ಕಾಲೇಜುಗಳು ಮತ್ತು 204 ಅನುದಾನ ರಹಿತ ಪ.ಪೂ. ಕಾಲೇಜುಗಳು ಶೇ. 100 ರಷ್ಟು ಫಲಿತಾಂಶ ಪಡೆದಿವೆ. 23 ಅನುದಾನರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ, 5 ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಫಲಿತಾಂಶಗಳನ್ನು ಆಯಾ ಕಾಲೇಜುಗಳಲ್ಲಿ ಪ್ರಕಟಿಸಲಾಗಿದ್ದು, ಆನ್ಲೈನ್ನಲ್ಲೂ ಫಲಿತಾಂಶಗಳನ್ನು ವೀಕ್ಷಿಸಬಹುದಾಗಿದೆ.
ಸ್ಕ್ಯಾನಿಂಗ್ ಮತ್ತು ಮರು ಮೌಲ್ಯಮಾಪನ ವಿವರ
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯಲು ಇಂದಿನಿಂದ 27 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರಿಗೆ ಉತ್ತರ ಪತ್ರಿಕೆಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಏ. 26 ರಿಂದ ಮೇ 2 ರವರೆಗೂ ಅವಕಾಶ ಇರುತ್ತದೆ. ಮೇ 3 ರಿಂದ ಸ್ಕ್ಯಾನಿಂಗ್ ಪ್ರತಿಯನ್ನು ತೆಗೆದುಕೊಂಡಿರುವವರು ಮರು ಮೌಲ್ಯಮಾಪನಕ್ಕೆ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 8 ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕಡೆಯ ದಿನ.
ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಮತ್ತು ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1670 ರೂ. ಶುಲ್ಕ ನಿಗದಿಪಡಿಸಲಾಗಿದೆ. ಅಂಕಗಳ ಮರು ಎಣಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.
ಮರುಮೌಲ್ಯಮಾಪನ ಮತ್ತು ಮರು ಎಣಿಕೆಯ ಫಲಿತಾಂಶವನ್ನು ಪದವಿ ಪೂರ್ವ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಜಿಲ್ಲಾವಾರು ಪಿಯು ಫಲಿತಾಂಶ ವಿವರ:
ದಕ್ಷಿಣ ಕನ್ನಡ – ಶೇ.95.33
ಉಡುಪಿ -ಶೇ.95.24
ಕೊಡಗು – ಶೇ.90.55
ಉತ್ತರ ಕನ್ನಡ – ಶೇ.89.74
ವಿಜಯಪುರ- ಶೇ.84.69
ಚಿಕ್ಕಮಗಳೂರು- ಶೇ.83.28
ಹಾಸನ – ಶೇ.83.14
ಶಿವಮೊಗ್ಗ – ಶೇ.83.13
ಬೆಂಗಳೂರು ಗ್ರಾಮಾಂತರ – ಶೇ.83.04
ಬೆಂಗಳೂರು ದಕ್ಷಿಣ- ಶೇ.82.30
ಬೆಂಗಳೂರು ಉತ್ತರ- ಶೇ.82.25
ಚಾಮರಾಜನಗರ – ಶೇ.81.92
ಮೈಸೂರು- ಶೇ.79.89
ಕೋಲಾರ – ಶೇ.79.20
ಬಾಗಲಕೋಟೆ- ಶೇ.78.79
ಚಿಕ್ಕೋಡಿ- ಶೇ. 78.76
ರಾಮನಗರ- ಶೇ.78.12
ಬೀದರ್ – ಶೇ.78
ಚಿಕ್ಕಬಳ್ಳಾಪುರ – ಶೇ. 77.77
ಮಂಡ್ಯ- ಶೇ.77.47
ದಾವಣಗೆರೆ – ಶೇ.75.72
ಕೊಪ್ಪಳ- ಶೇ.74.8
ತುಮಕೂರು – ಶೇ.74.50
ಹಾವೇರಿ – ಶೇ.74.13
ಬೆಳಗಾವಿ- ಶೇ.73.98
ಧಾರವಾಡ – ಶೇ.73.54
ಬಳ್ಳಾರಿ- ಶೇ.69.55
ಚಿತ್ರದುರ್ಗ- ಶೇ.69.50
ಕಲ್ಬರ್ಗಿ – ಶೇ.69.37
ಗದಗ- ಶೇ.66.91
ರಾಯಚೂರು- ಶೇ.66.21
ಯಾದಗಿರಿ- ಶೇ.62.98