ಸುದ್ದಿಮೂಲ ವಾರ್ತೆ
ಆನೇಕಲ್, ಏ. 21: ತಾಲ್ಲೂಕಿನ ಬೊಮ್ಮಸಂದ್ರ ಖಾಸಗಿ ಹೋಟೆಲ್ನಲ್ಲಿ ಇಂದು ಬಿಜೆಪಿ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ರಾಜಸ್ಥಾನದ ಮಾಜಿ ಸಚಿವ ಹಾಗೂ ಎಂಎಲ್ಸಿ ರಾಜೇಂದ್ರ ಗೋವ್ಲಟೆ ಹಾಗೂ ಮಹಾರಾಷ್ಟ್ರ ಮಾಜಿ ಗೃಹ ಮಂತ್ರಿಗಳಾದ ರಾಮ್ ಶಿಂಧೆ ಭಾಗಿಯಾಗಿದ್ದರು.
ಕಾರ್ಯಕರ್ತರಿಗೆ ಚುನಾವಣೆ ಎದುರಿಸುವ ಬಗ್ಗೆ ಸಲಹೆಗಳನ್ನು ನೀಡಿದರು. ತಮ್ಮ ರಾಜಕೀಯ ಜೀವನದ ಬಗ್ಗೆ ಕಾರ್ಯಕರ್ತರು ಜೊತೆಗೂಡಿ ಸಮಾಲೋಚನೆ ನಡೆಸಿದರು.
ಈ ವೇಳೆ ಮಾತನಾಡಿದ ರಾಜೇಂದ್ರ ಗೊವ್ಲಟೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತ ತರಬೇಕು. ಕೇಂದ್ರದ ಮಹತ್ವಕಾಂಕ್ಷೆ ಮತ್ತು ಮೋದಿಯ ವಿಭಿನ್ನ ಯೋಜನೆಗಳು ಜನರ ಕೈಹಿಡಿಯಲಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೊಮ್ಮಸಂದ್ರ ಕಾಂಗ್ರೆಸ್ ನಾಯಕ ಎಂ.ಬಿ. ರಾಮಚಂದ್ರ ಬಿಜೆಪಿಗೆ ಸೇರ್ಪಡೆಯಾದರು. ಅವರ ಜೊತೆಗೆ ಕೆಲ ಬೆಂಬಲಿಗರೂ ಪಕ್ಷ ಸೇರಿದರು.