ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.22: ಕಾಂಗ್ರೆಸ್ ಪಕ್ಷದ ನಾಲ್ಕು ಗ್ಯಾರಂಟಿ ಯೋಜನೆಗಳು ಬಿಜೆಪಿಯ 40% ಕಮಿಷನ್ ಭ್ರಷ್ಟಾಚಾರಕ್ಕಿಂತ ಬಹಳ ಉತ್ತಮ ಎಂದು ಅರಿತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ.
ಈ ಚುನಾವಣೆ 4 ಗ್ಯಾರಂಟಿ ಯೋಜನೆ ಹಾಗೂ 40% ಕಮಿಷನ್ ನಡುವಣ ಸಮರ. ಹೀಗಾಗಿ ರಾಜ್ಯದ ಪ್ರಗತಿ, ಕನ್ನಡದ ಅಸ್ಮಿತೆ ಉಳಿಸಲು, ಕರ್ನಾಟಕ ಏಷ್ಯಾದ ಸಿಲಿಕಾನ್ ವ್ಯಾಲಿಯನ್ನಾಗಿ ಮಾಡಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಜನರಿಗೆ ಅರಿವಾಗಿದೆ.
ಇಂದು ನಮ್ಮ ಜತೆ ಚಿಂತಾಮಣಿಯ ಡಾ.ವಿ. ಅಮರನಾಥ್ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಉಳಿದಂತೆ ಮಹದೇಪುರದಿಂದ ಹುಡಿ ರಾಮಚಂದ್ರ, ಡಾ.ಎಸ್. ಭಾಗ್ಯ, ಅಂಜನಪ್ಪ ಯಾದವ್, ಕೆ.ಎಂ ಮುನಿರಾಜು, ಪರಮೇಶ್ವರ್ ಅವರು ಪಕ್ಷ ಸೇರುತ್ತಿದ್ದಾರೆ. ಆಮೂಲಕ 40% ಕಮಿಷನ್ ವಿರುದ್ಧದ ನಮ್ಮ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ.
ಎಲ್ ಹನುಮಂತಯ್ಯ
ಇಂದು ಚಿಂತಾಮಣಿ ಹಾಗೂ ಮಹದೇಪುರ ಕ್ಷೇತ್ರದಿಂದ ಅತ್ಯಂತ ಕ್ರಿಯಾಶೀಲ ನಾಯಕರು ಪಕ್ಷ ಸೇರುತ್ತಿದ್ದಾರೆ. ಅಮರ್ ನನಗೆ ಬಹಳ ವರ್ಷಗಳಿಂದ ಪರಿಚಯವಿರುವ ವ್ಯಕ್ತಿ. ಜನತಾದಳದ ಎಸ್ ಸಿ ಮೋರ್ಚಾದ ಯುವ ಘಟಕ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿ ಪಕ್ಷಕ್ಕೆ ಬಲ ತುಂಬುತ್ತಿದ್ದಾರೆ. ಆಮೂಲಕ ನಮ್ಮ ಚಿಂತಾಮಣಿಯ ಅಭ್ಯರ್ಥಿ ಸುಧಾಕರ್ ಎಂಸಿಜಿ, ಅವರ ಗೆಲುವು ಇಂದು ಮತ್ತಷ್ಟು ನಿಶ್ಚಿತವಾಗಿದೆ.
ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಿದ್ಧಾಂತ ಒಪ್ಪಿ ರಾಮಚಂದ್ರ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷ ಸೇರುತ್ತಿದ್ದಾರೆ. ಇವರ ಜತೆಗೆ ಡಾ.ಎಸ್. ಭಾಗ್ಯ, ಅಂಜನಪ್ಪ ಯಾದವ್, ಕೆ.ಎಂ ಮುನಿರಾಜು, ಪರಮೇಶ್ವರ್ ಅವರು ಯಾವುದೇ ಆಸೆ ಆಮೀಷಗಳಿಲ್ಲದೇ, ಬೇಷರತ್ತಾಗಿ ಪಕ್ಷ ಸೇರುತ್ತಿದ್ದಾರೆ. ಇದರಿಂದ ಪಕ್ಷದ ಬಲ ಹೆಚ್ಚಲಿದೆ.
ಇಂದು ಕಾಂಗ್ರೆಸ್ ಪಕ್ಷ ರಾಜ್ಯದ ಅನೇಕ ಕ್ಷೇತ್ರಗಳ ನಾಯಕರು ಅದರಲ್ಲೂ ಯುವಕರು ಕಾಂಗ್ರೆಸ್ ಪಕ್ಷ ಬೆಂಬಲಿಸಲು ಮುಂದಾಗಿರುವುದು ಬಹಳ ಉತ್ತಮ ಬೆಳವಣಿಗೆ. ಇಂದು ಪಕ್ಷ ಸೇರುತ್ತಿರುವವರು ಯುವಕರಾಗಿದ್ದು, ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ಹೆಚ್ಚಿಗಿದೆ.