ಸುದ್ದಿಮೂಲ ವಾರ್ತೆ
ಮಾಲೂರು, ಏ.25: ತಾಲೂಕಿನಲ್ಲಿ ಸುಮಾರು 15 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗದೆ ಭ್ರಷ್ಟಾಚಾರ, ಲಂಚಗುಳಿತನ ತಾಂಡವಾಡುತ್ತಿದ್ದು ಅದನ್ನು ಹೋಗಲಾಡಿಸಿ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಂಬಿಗಾನಹಳ್ಳಿ ನಾರಾಯಣಮ್ಮ ತಿಳಿಸಿದರು.
ಪಟ್ಟಣದ ಕಾರ್ ಸ್ಟ್ಯಾಂಡ್ನಲ್ಲಿ ಕಾರು ಮಾಲೀಕರು ಮತ್ತು ಚಾಲಕರ ಬಳಿ ಮತಯಾಚಿಸಿ ಮಾತನಾಡಿದರು.
ತಾಲೂಕಿನಲ್ಲಿ ಬಡವರು, ದೀನ ದಲಿತರು, ರೈತರ ಕಷ್ಟಗಳಿಗೆ ಇದುವರೆಗೂ ಚುನಾಯಿತರಾಗಿರುವ ಜನ ಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡದೆ ಯಾವುದೇ ಸಾರ್ವಜನಿಕ ಕೆಲಸ ಕಾರ್ಯಗಳು ಆಗುತ್ತಿಲ್ಲ. ಕೂಲಿ ನಾಲಿ ಮಾಡುವ ಸಾಮಾನ್ಯ ಜನರು ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಕಂಗಾಲಾಗಿದ್ದಾರೆ ಎಂದರು.
ಇದನ್ನು ಗಮನಿಸಿದ ನಾನು ಈ ಚುನಾವಣೆಯಲ್ಲಿ ಜನರ ಕಷ್ಟಗಳನ್ನು ನಿವಾರಿಸಲು ಬದಲಾವಣೆಯಗೋಸ್ಕರ ನಾನು ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು. ನನಗೆ ಸೀರಿಯಲ್ ನಂಬರ್ 11 ತೆಂಗಿನ ಮರದ ಗುರುತು ಸಿಕ್ಕಿದ್ದು, ತಾಲೂಕಿನ ಎಲ್ಲಾ ಜನರು ಆಶೀರ್ವಾದ ಮಾಡಿ ಶಾಸಕರನ್ನಾಗಿ ಮಾಡುವಂತೆ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮೋಹನ ಸೇರಿದಂತೆ ಇನ್ನಿತರರು ಇದ್ದರು.