ಸುದ್ದಿಮೂಲ ವಾರ್ತೆ
ಏ,29: ಮೋದಿ ಅಂದ್ರೆ ವಿಷದ ಹಾವಿದ್ದಂತೆ, ವಿಷ ಹೌದೋ ಅಲ್ಲವೋ ಎಂದು ನೀವೇನಾದರೂ ನೆಕ್ಕಿ ನೋಡಲು ಹೋದರೆ ಸತ್ತು ಹೋಗ್ತೀರಿ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರೀಯೆ..ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ತೃಪ್ತಿಪಡಿಸಲು ಖರ್ಗೆ ಈ ರೀತಿ ಹೇಳಿಕೆ ನೀಡಿ ತಮ್ಮ ಗೌರವಕ್ಕೆ ತಾವೇ ಚ್ಯುತಿ ತಂದುಕೊಂಡಿದ್ದಾರೆ.
ಇಂದು ಕಾಂಗ್ರೆಸ್ ಮುಳುಗುತ್ತಿರುವ ಹಡಗು. ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾರಿಗೆ ಸಮವಲ್ಲ. ವಿಶ್ವವೇ ಕೊಂಡಾಡುವ ಮೋದಿ ಎಲ್ಲಿ, ದೇಶದೆಲ್ಲೆಡೆ ನೆಲಕಚ್ಚುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲಿ.?
ಸ್ಥಳೀಯ ಸಂಸ್ಥೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕುವವರನ್ನು ಕಂಡಿದ್ದೇವೆ. ಆದರೆ ನನಗೆ ಯಾರೂ ಒತ್ತಾಯ ಮಾಡದೆ ಸ್ವಯಂ ನಿರ್ಧಾರದೊಂದಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಎಂಭತ್ತು ವರ್ಷ ವಯಸ್ಸಾದರೂ ರಾಜ್ಯಾದ್ಯಂತ ಪ್ರವಾಸ ಮಾಡಿ ಪುನಃ ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಸಂಕಲ್ಪ. ಈ ಬಾರಿ 140 ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಯಾರ ಹಂಗು ಇಲ್ಲದೆ ಸ್ವಂತ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು