ಸುದ್ದಿಮೂಲ ವಾರ್ತೆ
ಆನೇಕಲ್, ಏ.29: ಬೊಮ್ಮಸಂದ್ರ ಪುರಸಭೆ ಸದಸ್ಯರಾದ ಚಲಪತಿ ಹಾಗೂ ಪ್ರಸಾದ್ ಸಹೋದರ ಮನೆ ಮೇಲೆ ಐಟಿದಾಳಿ ನಡೆದಿದೆ.
ಬೆಳಗ್ಗೆ ಮೂರು ಕಾರುಗಳಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು 7 ಮಂದಿ ಅಧಿಕಾರಿಗಳಿಂದ ಮನೆಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಮನೆಯಲ್ಲಿ ಎರಡುವರೆ ಲಕ್ಷ ಹಣ ಪತ್ತೆಯಾಗಿದ್ದು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಬಿಜೆಪಿ ನಾಯಕರ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್ ಅಭ್ಯರ್ಥಿಗೆ ಚಲಪತಿ ಬೆಂಬಲ ನೀಡಿದ್ದರು. ಇದರಿಂದ ದ್ವೇಷದ ರಾಜಕಾಣಕ್ಕಾಗಿ ಅವರ ವಿರುದ್ಧ ಐಟಿ ದಾಳಿ ಮಾಡಲಾಗಿದೆ. ಯಾವುದೇ ಅಸ್ತ್ರ ಉಪಯೊಗಿಸಿದರೂ ನಮ್ಮ ಮುಂದೆ ಬಿಜೆಪಿ ಆಟ ನಡೆಯುವುದಿಲ್ಲ ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ಚಲಪತಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.