ಸುದ್ದಿಮೂಲ ವಾರ್ತೆ
ಮಾಲೂರು, ಏ.30: ತಾಲೂಕಿನ ಸರ್ವತೋ ಮುಖ ಅಭಿವೃದ್ಧಿಗೆ ಮತ್ತೊಮ್ಮೆ ಕೆ.ವೈ. ನಂಜೇಗೌಡರನ್ನು
ಅಖಂಡ ಜಯಶೀಲರನ್ನಾಗಿ ಮಾಡುವಂತೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಾಕೀರ್ ಖಾನ್ ತಿಳಿಸಿದರು.
ಮಾಲೂರು ವಿಧಾನ ಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನoಜೇಗೌಡರ ಪರವಾಗಿ ಪಟ್ಟಣದಲ್ಲಿ
ಮತಯಾಚನೆ ಮಾಡಿ ಮಾತನಾಡಿದರು.
ಬಡವರ ದಿನ ದಲಿತರ ಆಶಾ ಕಿರಣ ಶಾಸಕ ನoಜೇಗೌಡರು ಕೇಂದ್ರ ಮತ್ತು ರಾಜ್ಯದಲ್ಲಿ ವಿರೋಧ ಪಕ್ಷ ಅಧಿಕಾರದಲ್ಲಿದ್ದರು ಐದುವರ್ಷ ತಾಲ್ಲೂಕಿನ ಪಕ್ಷತೀತವಾಗಿ ಅಭಿವೃದ್ಧಿ ಮಾಡಿದ್ದು ಮತ್ತಷ್ಟು ಅಭಿವೃದ್ಧಿ ಮಾಡಲು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮಂಜುಳಾ, ಎ.ಎಂ ಶಬೀರ್, ಮಂಜುನಾಥ್, ಶೈಲೇಶ್ ಇತರರು ಇದ್ದರು.