ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ.2: ಬೈಕ್ ಡಿಕ್ಕಿ ಹೊಡೆದು ವೃದ್ದ ಮೃತ ಪಟ್ಟಿರುವ ಘಟನೆ ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ನಡೆದಿದೆ. ನಡೆದು ಕೊಂಡು ಹೊಗುತ್ತಿದಂತಹ ವ್ಯಕ್ತಿಯ ಮೇಲೆ ಬೈಕ್ ಬಂದು ಡಿಕ್ಕಿ ಹೊಡೆದ ಹಿನ್ನೆಲೆ ವೃದ್ದ ಅಶೋಕ ಪಿಲ್ಲರ್ ಬಳಿ ಬಿದಿದ್ದರು. ಅಪಘಾತ ಸಂಬವಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ವೃದ್ದ 60 ವರ್ಷದ ಗಣೇಶ್ ಬಳ್ಳಾರಿ ಮೂಲದವರಾಗಿದ್ದು ಸೋಮವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಪಘಾತ ಸಂಬವಿಸಿದ ಕೂಡಲೇ ಗಣೇಶಗೆ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿಸಲು ಅಂಬುಲೇನ್ಸ್ ಗೆ ಕರೆ ಮಾಡಿದರು ಕರೆಗೆ ಸಿಕಿಲ್ಲ ಸುಮಾರು 2 ಗಂಟೆಗಳ ಕಾಲ ಕಾದರು ಕೂಡ ಅಂಬುಲೆನ್ಸ್ ಬಂದಿಲ್ಲ, ಬಳಿಕ ಖಾಸಗಿ ಅಂಬುಲೆನ್ಸ್ ಗೆ ಕರೆ ಮಾಡಿ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯದರೆ ಬೆಡ್ ಖಾಲಿಯಿಲ್ಲವೆಂದು ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅಲ್ಲಿಯೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವಪ್ಪಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆಯವರು ಚಿಕಿತ್ಸೆ ನೀಡಿದ್ದಾರೆ ಬದುಕುಳಿಯುತ್ತಿದ್ದರು ಎಂದು ಗಣೇಶ್ ಕುಟುಂಬಸ್ಥರು ನಿಮ್ಹಾನ್ಸ್ ಆಸ್ಪತ್ರೆಯ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಘಟನೆಯಲ್ಲಿ ಬೈಕ್ನಲ್ಲಿದ್ದ ಇಬ್ಬರು ಸವಾರರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣ ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.