ಸುದ್ದಿಮೂಲ ವಾರ್ತೆ
ಮೈಸೂರು, ಮೇ 4: ಕೆಲವೇ ದಿನಗಳ ಹಿಂದಷ್ಟೇ ಚುನಾವಣಾ ಸಲ್ಲದ ಆಕೇಪಾರ್ಹ ಹೇಳಿಕೆ ನೀಡಬಾರದು ಎಂದ ಎಚ್ಚರಿಕೆ ನೀಡುವ ಬೆನ್ನಲ್ಲೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ರಾಜ್ಯದ ಸಂಸದರ ಆಕೇಪಾರ್ಹ ಪದ ಬಳಸಿ ಟೀಕಾ ಪ್ರಹಾರ ನಡೆಸಿದ್ದಾರೆ.
ಮೈಸೂರು ಜಿಲ್ಲೆಯ ಟಿ ನರಸೀಪುರದ ಬನ್ನೂರಿನಲ್ಲಿ ಬುಧವಾರ ಜೆಡಿಎಸ್ ಸಭೆಯಲ್ಲಿ ಮಾತನಾಡುತ್ತಾ ಅವರು, ರಾಜ್ಯದ ಸಂಕಷ್ಟಗಳ ಬಗ್ಗೆ ಸಂಸದರು ಲೋಕಸಭೆಯಲ್ಲಿ ಮಾತನಾಡುತ್ತಿಲ್ಲ. ಬಿಜೆಪಿಯ 25 ಸಂಸದರು ನರಸತ್ತ ನಾಮರ್ದರು ಎಂದು ಆಕ್ಷೇಪಾರ್ಹ ಪದ ಬಳಸಿದರು.
ಕೋವಿಡ್ ಬಂದಾಗ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿಲ್ಲ. ಮಳೆ ಬಂದು ಜನ, ಮನೆ ಕೊಚ್ಚಿ ಕೊಂಡು ಹೋದಾಗ ಬರಲಿಲ್ಲ. ಈಗ ಚುನಾವಣೆಯ ಹೊತ್ತಿನಲ್ಲಿ ಪದೇ ಪದೇ ಬರುತ್ತಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಶಾರ್ಟ್ ಕಟ್ ರಾಜಕಾರಣ ಮಾಡುತ್ತಿವೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿಯಾಗುವುದಿಲ್ಲ. ಸಮಾಜ ಒಡೆಯುವ ಕೆಲಸವನ್ನು ಮಾಡುತ್ತಿವೆ. ಕಾಂಗ್ರೆಸ್, ಜೆಡಿಎಸ್ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ವೋಟ್ ಬ್ಯಾಂಕ್ ರಾಜಕಾರಣದ ಬಗ್ಗೆ ಹುಷಾರಾಗಿರಬೇಕು ಎಂದು ಹೇಳುವ ಮೋದಿ ಅವರು, ಮಳೆ ಬಂದು ಕನ್ನಡಿಗರು ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾಗ ಏಕೆ ? ಬರಲಿಲ್ಲ ಎಂದು ಪ್ರಶ್ನಿಸಿದರು.