ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ.5: ನಾನು ಏ.18ರಿಂದ 12-13 ಕ್ಷೇತ್ರಗಳ ಪ್ರಚಾರ ಮಾಡಿದ್ದು, ಕೆಲವು ಕಡೆಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಜತೆ ಮಾಡಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ನಾಲ್ಕೈದು ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದೇವೆ. ಕಳೆದ ಚುನಾವಣೆಯಲ್ಲಿ 60 ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳಲ್ಲಿ ತೆಲುಗು ಭಾಷಿಕರು ಹೆಚ್ಚಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಉಳಿದ 20 ಕ್ಷೇತ್ರದಲ್ಲಿ ಬಿಜೆಪಿ, 5 ಕ್ಷೇತ್ರಗಳಲ್ಲಿ ದಳ ಗೆದ್ದಿದೆ. ಈ ಬಾರಿ 60 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲು ಕೆಲಸ ಮಾಡಲಾಗುತ್ತಿದೆ.
ಈ ಚುನಾವಣೆಯಲ್ಲಿ ಎರಡು ವಿಚಾರಗಳು ಕಾಂಗ್ರೆಸ್ ಪರವಾಗಿ ಅಲೆ ಸೃಷ್ಟಿಸಿದೆ. ಒಂದು ರಾಹುಲ್ ಗಾಂಧಿ ಅವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ. ಸುಳ್ಳು ಕೇಸು, ನ್ಯಾಯಾಲಯ ದಾರಿ ತಪ್ಪಿಸಿ, ಶಿಕ್ಷೆ ಕೊಡಿಸಿ ಅವರನ್ನು ಅನರ್ಹರನ್ನಾಗಿ ಮಾಡಿದ್ದಾರೆ. ಇಂದಿರಾಗಾಂಧಿ ಅವರಿಗೆ ಮಾಡಿದ್ದನ್ನೇ ಈಗ ರಾಹುಲ್ ಗಾಂಧಿ ಅವರಿಗೆ ಮಾಡುತ್ತಿದ್ದು, ಅಂದು ಚಿಕ್ಕಮಗಳೂರಿನ ಜನ ಹೇಗೆ ಇಂದಿರಾ ಅವರಿಗೆ ಬೆಂಬಲ ನೀಡಿದರೋ, ಅದೇ ರೀತಿ ರಾಹುಲ್ ಗಾಂಧಿ ಅವರಿಗೆ ಪುನರಾವರ್ತನೆಯಾಗಲಿದೆ. ಕರ್ನಾಟಕದ ಜನ ಇಂತಹ ದಬ್ಬಾಳಿಕೆ ಸಹಿಸುವುದಿಲ್ಲ.
ಇನ್ನು ಎರಡನೇ ವಿಚಾರ ಗುಜರಾತ್ ಮಾಡೆಲ್ ಎನ್ನುತ್ತಿದ್ದಾಗ ಜನರಿಗೆ ಅರ್ಥವಾಗಿರಲಿಲ್ಲ. ಆದರೆ ಈಗ ಗುರಾತಿಗೆ ರಾಜ್ಯದ ಸಂಸ್ಥೆಗಳನ್ನು ವಿಲೀನ ಮಾಡುವುದು ಎಂಬುದು ಜನರಿಗೆ ಅರ್ಥವಾಗಿದೆ. ನಂದಿನಿ ಹೆಸರನ್ನು ನಾಶ ಮಾಡಿ ಅಮೂಲ್ ಸ್ಥಾಪನೆ ಮಾಡಲು ಸಂಚು ರೂಪಿಸಿರುವುದು ಗ್ರಾಮೀಣ ಭಾಗದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಂದಿನಿ ಭಾವನಾತ್ಮಕವಾಗಿ ಜನರಿಗೆ ಹತ್ತಿರವಾಗಿದ್ದು, ಹೀಗಾಗಿ ಬಿಜೆಪಿ ಈಗ ಅರ್ಧ ಲೀಟರ್ ನಂದಿನಿ ಹಾಲು ಉಚಿತವಾಗಿ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ನೋಡಿದಾಗ ಈ ಬಾರಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದ್ದು, ಕಾಂಗ್ರೆಸ್ ಸ್ವಂತ ಬಲದ ಆಧಾರದ ಮೇಲೆ ಸರ್ಕಾರ ರಚನೆ ಆಗಲಿದೆ