ಬೆಂಗಳೂರು,ಮೇ.5: ಹುಡುಗಿಯರಿಗೆ ಬಟ್ಟೆಧರಿಸುವುದೇ ಒಂದು ಬಹು ದೊಡ್ಡ ಸವಾಲು, ಯಾವುದೇ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದರೆ ವಾರದ ಮೊದಲೇ ಬಟ್ಟೆಯ ಬಗ್ಗೆ ಯೋಚಿಸಿರುತ್ತಾರೆ. ಯಾವ ಬಟ್ಟೆಯನ್ನು ಧಸಿರುವುದು ಸೂಕ್ತ ಎಂಬ ಅಲೋಚನೆಯಲ್ಲಿ ಮುಳುಗಿರುತ್ತಾರೆ. ಅವರ ಆ ಒಂದು ಗೊಂದಲವನ್ನು ಹೊಗಲಾಡಿಸಲು ಕೆಲವು ಟಿಪ್ಸ್ ಗಳನ್ನು ಈ ಮೂಲಕ ತಿಳಿಯೋಣ.
ಮೊದಲು ಮಹಿಳೆಯಾರು ಯಾವ ದೇಹದ ಆಕೃತಿ ಹೊಂದಿದ್ದಾರೆ ಎಂಬುವುದನ್ನು ತಿಳಿಯಬೇಕಾಗುತ್ತದೆ. ಉದಾಹರಣೆ ನೋಡುವುದಾದರೆ ದಪ್ಪ ಅಥವಾ ತೆಳ್ಳಗಿರುವವರು ಯಾವ ತರಹದ ಬಟ್ಟೆ ಹಾಕುವುದರಿಂದ ಅವರ ದೇಹಕ್ಕೆ ಆ ಬಟ್ಟೆ ಹೊಂದಿಕೊಳ್ಳುತ್ತದೆ ಎಂಬುವುದನ್ನು ಮೊದಲು ನಾವು ಗಮನಿಸ ಬೇಕಾಗುತ್ತದೆ.
ಬಟ್ಟೆ ಖರಿದಿಸುವ ವೇಳೆಯಲ್ಲಿ ಯಾವ ತರಹ ಬಟ್ಟೆ ನಮ್ಮ ದೇಹಕ್ಕೆ ಹೊಂದಿಕೊಳ್ಳುತ್ತದೆ ಎಂಬುವುದನ್ನು ಗಮನದಲ್ಲಿ ಇಟ್ಟುಕೊಂಡು ಬಟ್ಟೆ ಖರಿದಿಸಿ. ಬಣ್ಣ,ಪ್ಯಾನ್ಸಿ ಎಂದು ಬಟ್ಟೆಯನ್ನು ಖರೀದಿಸಿ ಆ ಉಡುಪನ್ನು ನಿಮಗೆ ಬೇಕಾದ ರೀತಿಯಲ್ಲಿ ಬದಲಿಸುವುದಕ್ಕಿಂತ ಖರಿದಿಸುವ ಮೊದಲೇ ಯೋಚಿಸಿ.
ದೇಹದ ಆಕೃತಿ ಮೇಲೆ ಬಟ್ಟೆಯು ಹೊಂದಿಕೊಳ್ಳುವುದು ಮತ್ತು ಸುಂದರವಾಗಿ ಕಾಣುವಂತೆ ಮಾಡಲು ಇದು ಮೊದಲನೇ ಹಂತವಾಗಿದೆ.
ಇಲ್ಲಿ ತೆಳ್ಳಗಿರುವವರು ಯಾವ ರೀತಿಯ ಬಟ್ಟೆ ಧರಿಸುವುದು ಸೂಕ್ತ, ಯಾವತರಹದ ಉಡುಪು ಧಸಿರುವುದರಿಂದ ಸುಂದರವಾಗಿ ಕಾಣುವಂತೆ ಮಾಡಲು ಸಾಧ್ಯ, ಮತ್ತು ಸ್ವಲ್ಪ ಮಟ್ಟಿಗೆ ಆದರು ಅವರ ತೆಳ್ಳಗಿನ ದೇಹವನ್ನು ಮರೆಮಾಚುವಲ್ಲಿ ಈ ಕೆಳಗಿನ ಅಂಶಗಳು ಸಹಕಾರಿಯಾಗುತ್ತದೆ.
ಮೊಟ್ಟಮೊದಲನೇಯಾದಾಗಿ ತೆಳ್ಳಗಿರುವವರು ಮೈಗೆ ಅಂಟಿಕೊಳ್ಳುವಂತಹ ಬಟ್ಟೆಯನ್ನು ಧರಿಸಬಾರದು ಇದರಿಂದ ಅವರು ಇನ್ನಷ್ಟು ತೆಳ್ಳಗಿ ಕಾಣುವ ಸಾಧ್ಯತೆ ಇರುತ್ತದೆ. ಬದಲಾಗಿ ಸಡಿಲ ಇರುವಂತಹ ಬಟ್ಟೆ ಧರಿಸುವುದು ಸೂಕ್ತ.
ಇವರು ತುಂಬ ಉದ್ದನೇಯ ಬಟ್ಟೆ ಧರಿಸುವುದಕ್ಕಿಂತ ಚಿಕ್ಕ ಬಟ್ಟೆಯನ್ನು ಧರಿಸುವುದರಿಂದ ಸ್ವಲ್ಪ ಮಟ್ಟಿಗೆಯಾದರು ಅವರ ದೇಹವನ್ನು ಮರೆಮಾಚಬಹುದು.
ಗಾಢವಾಗಿರುವಂತಹ ಬಣ್ಣದ ಬಟ್ಟೆಯಿಂದ ದೂರ ಇರುವುದು ಸೂಕ್ತ ಅದಷ್ಟು ತಿಳಿ ಬಣ್ಣದ ಬಟ್ಟೆ ಧರಿಸುವುದು ಒಳ್ಳೆಯದು.
ಅದಷ್ಟು ದಪ್ಪ ಇರುವಂತಹ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಮರೆಯಬೇಡಿ.
ಎರಡು ಪದರ ಹೊಂದಿರುವಂತಹ ಬಟ್ಟೆಯು ಹೆಚ್ಚು ಸಹಕಾರಿ ಅನಿಸುತ್ತದೆ.
ಅದೇರೀತಿ ಸೀರೆ ವಿಚಾರಕ್ಕೆ ಬಂದರೆ ಕಾಟನ್ ಸೀರೆ ನಿಮಗೆ ಸೂಕ್ತ ಫ್ಯಾನ್ಸಿ ಸೀರೆಗಿಂತ ಕಾಟನ್ ಸೀರೆ ಧರಿಸುವುದರಿಂದ ತೆಳ್ಳಗೆ ಕಾಣುವುದನ್ನು ತಪ್ಪಿಸ ಬಹುದು ಮತ್ತು ಚಿಕ್ಕ ಬರ್ಡರ್ ಸೀರೆ ಉತ್ತಮ, ಇಲ್ಲೂ ಕೂಡ ತಿಳಿ ಬಣ್ಣದ ಸೀರೆಯೇ ಸೂಕ್ತ.