ಸುದ್ದಿಮೂಲ ವಾರ್ತೆ
ಮಾಲೂರು, ಮೇ 5: ಬಿಜೆಪಿ ಹಾಗೂ ಕಾಂಗ್ರೆಸ್ ಪಾರ್ಟಿಗಳನ್ನು ನೋಡಿದ್ದೀರಿ, ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನನಗೂ ಒಂದು ಅವಕಾಶ ಕೊಡಿ ಎಂದು ಮಾಲೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಇ. ರಾಮೇಗೌಡ ತಿಳಿಸಿದರು.
ತಾಲೂಕಿನ ಚಿಕ್ಕಕುಂತೂರು ಗ್ರಾಮದಲ್ಲಿ ಮತ ಯಾಚನೆ ಮಾಡಿ ಮಾತನಾಡಿದ ಅವರು, ತಾಲೂಕಿನ ರೈತನ ಮಗನಾದ ನಾನು ಕಷ್ಟ ಪಟ್ಟು ಓದಿ ನಾನು ಎಂಜಿನಿಯರ್ ಆಗಿದ್ದೇನೆ. ತಾಲ್ಲೂಕಿನ ಬಡವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುಂದೆ ತರುವ ಉದ್ದೇಶದಿಂದ ನನ್ನ ಸ್ವಂತ ದುಡಿಮೆ ಒಂದು ಪಾಲಿನಲ್ಲಿ 20 ವರ್ಷಗಳಿಂದ ಉಚಿತವಾಗಿ ಪಠ್ಯ ಪುಸ್ತಕ, ನೋಟ್ ಪುಸ್ತಕ ಶಾಲಾ ಬ್ಯಾಗ್ ನೀಡುತ್ತಾ ಬರುತ್ತಿದ್ದೇನೆ. ಮಹಿಳೆಯರಿಗೆ ಟೈಲರಿಂಗ್ ತರಬೇತಿ, ಯುವಕರಿಗೆ ಕಂಪ್ಯೂಟರ್ ತರಬೇತಿ ನೀಡಿ ಸಮಾಜದ ಮುಖ್ಯವಾಹಿನಿ ತರಲು ಶ್ರಮಿಸಿದ್ದೇನೆ ಜತಗೇ ಬಡವರ ಮಕ್ಕಳ ವಿವಾಹಕ್ಕೆ ದೇವಾಲಯ ಅಭಿವೃದ್ಧಿ ಸಹಕಾರ ಮಾಡಿದ್ದೇನೆ ಎಂದು ವಿವರಿಸಿದರು.
ರಾಜಕೀಯವಾಗಿ ಜಿಲ್ಲಾ ಪಂಚಾಯತಿ ಸದಸ್ಯನಾಗಿ ಐದು ವರ್ಷ ಸೇವೆ ನಂತರ ಮಾಲೂರು ವಿಧಾನಸಭಾ ಚುನಾವಣೆ ಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 20 ಸಾವಿರ ಮತ ಪಡೆದು ಸೋಲನ್ನು ಕಂಡರೂ ಯಾವುದೇ ಅಧಿಕಾರ ವಿಲ್ಲದೆ ಜನಸೇವೆ ಮಾಡುಕೊಂಡು ಬರುತ್ತಿದ್ದೇನೆ. ನನ್ನ ನಿಷ್ಠಾವಂತ ಸೇವೆಯನ್ನು ಗುರ್ತಿಸಿ ಜೆಡಿಎಸ್ ವರಿಷ್ಟ್ರು ಜೆಡಿಎಸ್ ಟಿಕೆಟ್ ನೀಡಿತ್ತು. ರಾಜ್ಯದಲ್ಲಿ ಕುಮಾರಣ್ಣ ಮುಖ್ಯಮಂತ್ರಿ ಮಾಡಲು ತಾಲೂಕಿನಲ್ಲಿ ಜೆಡಿಎಸ್ ಪಾರ್ಟಿಗೆ ಮತನೀಡಿ ನನ್ನ ಶಾಸಕನನ್ನಾಗಿ ಮಾಡಬೇಕು ಎಂದರು.
ಮತದಾರರಿಗೆ ಎರಡು ಪಾರ್ಟಿಯವರು ಅವರ ಅವಧಿಯಲ್ಲಿ ಲೂಟಿ ಮಾಡಿರುವಹಣವನ್ನು ಕೊಡುತ್ತಾರೆ. ನಾನು ಕಷ್ಟ ಪಟ್ಟು ದುಡಿದ ಹಣವನ್ನು ವಿದ್ಯಾರ್ಥಿಗಳ ಶ್ರಯೋಭಿವೃದ್ಧಿ ನೀಡಿದ್ದೆ. ಯಾರು ಏನು ಕೊಟ್ಟರೂ ತೆಗೆದುಕೊಳ್ಳಿ ತಾಲೂಕಿನ ಮನೆ ಮಗನಾದ ನನ್ನ ಗೆಲ್ಲಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಗೌಡ, ಬಲ್ಲಹಳ್ಳಿ ನಾರಾಯಣಸ್ವಾಮಿ, ಅನೆ ಪುರ ದೇವರಾಜ್, ಮಂಜುನಾಥ್, ಮಲ್ಲಿಕಾರ್ಜುನ್, ನವೀನ್, ಲವಕುಶ, ಸಂಜು ಮೋನಿಶ್, ಆಪ್ತ ಕಾರ್ಯದರ್ಶಿ ದರ್ಶನ್ ಸೇರಿದಂತೆ ಇನ್ನಿತರರು ಇದ್ದರು.