ಹಾವೇರಿ, ಮೇ 11: ಎಕ್ಸಿಟ್ ಪೋಲ್ ಒಂದೊಂದು ರೀತಿ ತೋರಿಸುತ್ತಿವೆ. ನಮ್ಮ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ಮೂಲಕ ನಾವು ಸಂಪೂರ್ಣ ಬಹುಮತ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು
ಎಕ್ಸಿಟ್ ಪೋಲ್ ಒಂದೇ ರಿತಿಯಾಗಿಲ್ಲ; ಫಲಿತಾಂಶಕ್ಕಾಗಿ ಮೇ 13ರವರೆಗೆ ಕಾಯೋಣ. ಎಕ್ಸಿಟ್ ಪೋಲ್ ನೂರಕ್ಕೆ ನೂರರಷ್ಟು ನಿಖರವಾಗಿರುವುದಿಲ್ಲ. 5 ರಿಂದ 10% ಹೆಚ್ಚು ಕಮ್ಮಿ ಆಗುತ್ತಿರುತ್ತದೆ. ಒಂದೊಂದು ಸಂಸ್ಥೆ ಒಂದೊಂದು ರೀತಿ ತೋರಿಸುತ್ತಿದೆ, ಯಾವುದು ಸ್ಥಿರವಾಗಿಲ್ಲ. ನಮಗೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ಇದೆ. ಸಂಪೂರ್ಣ ಬಹುಮತ ಸಿಗುತ್ತದೆ ಎಂದು ಅವರು ಹಾವೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆಯ ನಿಜವಾದ ಫಲಿತಾಂಶಕ್ಕೆ ಮೇ 13ರವರೆಗೆ ಕಾಯೋಣ. ರೆಸಾರ್ಟ್ ರಾಜಕೀಯ ಇಲ್ಲ. ಯಾವುದೇ ರೆಸಾರ್ಟ್ ಆಗುವುದಿಲ್ಲ. ಈ ಬಾರಿ ಆ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ. ಜೆಡಿಎಸ್ ಕಿಂಗ್ ಮೇಕರ್ ಆಗುವ ಅವಶ್ಯಕತೆಯೇ ಇಲ್ಲ ಎಂದರು.
ಬೆಂಗಳೂರಿನಲ್ಲಿ ಸಮ ಸಮ
ರಾಜಧಾನಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಮ-ಸಮ ಸೀಟು ಸಿಗುತ್ತದೆ ಎಂದು ಇಂಡಿಯಾ ಟಿವಿ ಭವಿಷ್ಯ ನುಡಿದಿದೆ. ಬೆಂಗಳೂರಿನಲ್ಲಿ ಬಿಜೆಪಿಗೆ 13ರಿಂದ 15 ಸೀಟು, ಕಾಂಗ್ರೆಸ್ ಪಕ್ಷಕ್ಕೆ 16-18, ಇತರೆ 3 ಸೀಟು ಗೆಲ್ಲುವುದಾಗಿ ಇದು ಭವಿಷ್ಯ ನುಡಿದಿವೆ
ಕಲ್ಯಾಣ ಕರ್ನಾಟಕದಲ್ಲಿ ಯಾರ ದರ್ಬಾರ್?
ಕಲ್ಯಾಣ ಕರ್ನಾಟಕದಲ್ಲೂ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದೆ. ಈ ಭಾಗದಲ್ಲಿ ಕಾಂಗ್ರೆಸ್ 22-26 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಬಿಜೆಪಿ 11-15 ಸ್ಥಾನ ಪಡೆದರೆ, ಇನ್ನು ಜೆಡಿಎಸ್ 1-5 ಸ್ಥಾನದಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಇತರರು 0-2 ಸ್ಥಾನ ಪಡೆಯುವ ಸಾಧ್ಯತೆಯ ಬಗ್ಗೆ ರಿಪಬ್ಲಿಕ್ ಮತ್ತು ಪಿ-ಮಾರ್ಕ್ ಎಕ್ಸಿಟ್ ಪೋಲ್ ಮಾಹಿತಿ ನೀಡಿದೆ.
ಕಿತ್ತೂರು ಕರ್ನಾಟಕದಲ್ಲಿ ಅರಳುತ್ತಾ ಕಮಲ?
ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಅಬ್ಬರಿಸಲಿದೆ ಎಂದು ರಿಪಬ್ಲಿಕ್ ಮತ್ತು ಪಿ-ಮಾರ್ಕ್ ಎಕ್ಸಿಟ್ ಪೋಲ್ ಹೇಳಿದ್ದರೆ, ಇನ್ನೊಂದ್ಕಡೆ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಅಬ್ಬರ ತೋರಲಿದೆ ಎನ್ನಲಾಗಿದೆ. ಈ ಮಾಹಿತಿ ಪ್ರಕಾರ ಬಿಜೆಪಿ 25ರಿಂದ 29 ಸ್ಥಾನದಲ್ಲಿ ಗೆಲ್ಲಲಿದೆ ಮತ್ತು ಕಾಂಗ್ರೆಸ್ ಪಕ್ಷ 21ರಿಂದ 25 ಸ್ಥಾನದಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇದೆ. ಜೆಡಿಎಸ್ 0-2 ಸ್ಥಾನ ಪಡೆಯಬಹುದು ಎನ್ನಲಾಗಿದ್ದು, ಇತರರು ಕೂಡ ಇದೇ ಹಾದಿಯಲ್ಲಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹವಾ?
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇಲ್ಲಿ ಜೆಡಿಎಸ್ ಸುಮಾರು 20ರಿಂದ 25 ಸ್ಥಾನ ಗೆದ್ದರೆ ಕಾಂಗ್ರೆಸ್ಗೆ 14ರಿಂದ 18 ಸೀಟ್ಗಳು ಸಿಗುವ ಮುನ್ಸೂಚನೆ ನೀಡಲಾಗಿದೆ. ಇನ್ನುಳಿದಂತೆ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ 5ರಿಂದ 9 ಸ್ಥಾನ ಪಡೆಯುವ ಸಾಧ್ಯತೆ ಇದೆ. ಇತರರು 0-2 ಸ್ಥಾನ ಪಡೆದರೆ ಹೆಚ್ಚು ಎಂದು ಹೇಳಲಾಗಿದೆ.
ಕರಾವಳಿಯಲ್ಲಿ ಬಿಜೆಪಿಯೇ ಭರ್ಜರಿ
ಇಂಡಿಯಾ ಟುಡೇ ಮೈ ಆಕ್ಸಿಸ್ ಮತ್ತು ಟೈಮ್ಸ್ ನೌ ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ಭರ್ಜರಿ ಸೀಟು ಸಿಗಲಿದೆ ಎಂದು ಭವಿಷ್ಯ ನುಡಿದಿದೆ. ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿಗೆ 16, ಕಾಂಗ್ರೆಸ್-3, ಇತರೆ-0. ಇಂಡಿಯಾ ಟುಡೇ ಪ್ರಕಾರ ಬಿಜೆಪಿ-16, ಕಾಂಗ್ರೆಸ್-3 ಮತ್ತು ಇತರೆ-0. ಇಲ್ಲಿ ಮತ ಹಂಚಿಕೆ ನೋಡಿದರೆ ಬಿಜೆಪಿ ಶೇ 50, ಕಾಂಗ್ರೆಸ್ ಶೇ-40 ಮತ್ತು ಇತರೆ ಶೇ 10 ಇದೆ.
—————————————
ಸಿ ವೋಟರ್
ಬಿಜೆಪಿ: 83-95
ಕಾಂಗ್ರೆಸ್: 100-112
ಜೆಡಿಎಸ್: 21-29
ಇತರೆ: 02-06
ರಿಪಬ್ಲಿಕ್
ಬಿಜೆಪಿ: 85-100
ಕಾಂಗ್ರೆಸ್:94-108
ಜೆಡಿಎಸ್: 24-38
ಇತರೆ: 02-06
ಜೀ ನ್ಯೂಸ್
ಬಿಜೆಪಿ: 79-94
ಕಾಂಗ್ರೆಸ್: 103-118
ಜೆಡಿಎಸ್: 25-33
ಇತರೆ: 02-05
ಎಬಿಪಿ ನ್ಯೂಸ್
ಬಿಜೆಪಿ: 66-86
ಕಾಂಗ್ರೆಸ್: 81-101
ಜೆಡಿಎಸ್: 20-27
ಇತರೆ: 03
ಪೋಲ್ಸ್ಟಾರ್
ಬಿಜೆಪಿ: 88-98
ಕಾಂಗ್ರೆಸ್: 99-109
ಜೆಡಿಎಸ್: 21-26
ಇತರೆ: 02-04
ಟುಡೇಸ್ ಚಾಣಕ್ಯ
ಬಿಜೆಪಿ: 92
ಕಾಂಗ್ರೆಸ್: 120
ಜೆಡಿಎಸ್: 12
ಇತರೆ: 00