ಸುದ್ದಿಮೂಲ ವಾರ್ತೆ
ಮೈಸೂರು, ಮೇ 11: ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಿಗೆ ಬುಧವಾರ ಶಾಂತಿಯುತ ಮತದಾನ ನಡೆದು, ಶೇ. 82.6 ರಷ್ಟು ಮತದಾನವಾಗಿದೆ. ಮತದಾರ ಪ್ರಭುಗಳು ಚುನಾವಣಾ ಕಣದಲ್ಲಿ 143 ಅಭ್ಯರ್ಥಿಗಳ ಹಣೆಬರಹವನ್ನು ಗುಂಡಿ ಹೊತ್ತುವ ಮೂಲಕ ಬರೆದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಏಳಿಗೆಹುಂಡಿ ಗ್ರಾಮಸ್ಥರು ಗ್ರಾಮಕ್ಕೆ ಯಾವುದೇ ಮೂಲಸೌಲಭ್ಯ ಒದಗಿಸಿಲ್ಲ ಎಂದು ಕೆಲ ಕಾಲ ಮತದಾನ ಬಹಿಷ್ಕರಿಸಿದ್ದರು. ಇನ್ನುಳಿದಂತೆ ಪ್ರಜಾಪ್ರಭುತ್ವದ ಉಸಿರಾದ ಮತದಾನ ಯಶಸ್ವಿಯಾಯಿತು. ಬೆಳಗ್ಗೆ 8. 30 ರಿಂದಲೇ ಮತಗಟ್ಟೆಗಳತ್ತ ಧಾವಿಸಿದ ಮತದಾರರು, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಹಿಂದೆಲ್ಲಾ ಗ್ರಾಮೀಣ ಭಾಗದಲ್ಲಿ ಮಾತ್ರ ಮತದಾನ ಬಿರುಸಿನಿಂದ ನಡೆದಿತ್ತು. ಈ ಬಾರಿ ನಗರ ಭಾಗದಲ್ಲಿ ಹೆಚ್ಚಿನ ಮತದಾನ ಆಗಿದೆ. ಮತಗಟ್ಟೆಗಳ ಆಯಾ ಪಕ್ಷಗಳ ಕಾರ್ಯಕರ್ತರು ಕೊನೆ ಕ್ಷಣದವರೆಗೂ ಮತ ಭಿಕ್ಷೆ ಬೇಡಿದರು. ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ತಾಲ್ಲೂಕಿನ ಏಳಿಗೆಹುಂಡಿ ಗ್ರಾಮದಲ್ಲಿ ಚುನಾವಣೆಯ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರನ್ನು ಅಧಿಕಾರಿಗಳು ಮನವೊಲಿಸಿದರು. ನಂತರ ಮತದಾನ ನಡೆಯಿತು. ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ತಮ್ಮ ಹುಟ್ಟೂರಾದ ಸಿದ್ದರಾಮಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕುಗ್ರಾಲ್ ಛತ್ರ ಗ್ರಾಮದಲ್ಲಿ ಜಿ.ಟಿ.ದೇವೇಗೌಡ,ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ಡಾ.ಎಸ್.ಸಿ. ಮಹಾದೇವಪ್ಪ, ಸಂಸದ ಪ್ರತಾಪ್ ಸಿಂಹ ಮತ್ತಿತರ ಗಣ್ಯರು ಮತದಾನ ಮಾಡಿದರು. ಮತಗಟ್ಟೆಯಲ್ಲಿ ಕಾದು ಕುಳಿತ ರಾಜವಂಶಸ್ಥೆ ಮೈಸೂರು ನಗರದ ಅಗ್ರಹಾರದಲ್ಲಿ ಈರುವ ಶ್ರೀಕಾಂತ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಲು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಬಂದರು. ಆದರೆ ಅಗತ್ಯ ದಾಖಲೆಗಳು ಇಲ್ಲದೆ ಕಾರಣ ಕೆಲ ಸಮಯ ಕಾದು ಕುಳಿತ ಘಟಲನೆ ನಡೆಯಿತು. ದಾಖಲೆಗಳನ್ನು ತರಿಸಿ ಕೊಂಡು ನಂತರ ಮತದಾನ ಮಾಡಿದರು. ಸಿದ್ದು ಬಲಗೈಗೆ ಶಾಯಿ ಚುನಾವಣಾ ಸಿಬ್ಬಂದಿ ಅವರ ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ. ವರುಣಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಅವರು ಮತ ಚಲಾಯಿಸಿದ್ದು, ಈ ವೇಳೆ ಚುನಾವಣಾ ಸಿಬ್ಬಂದಿ ಅವರ ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ. ಆದರೆ ಸಿದ್ದರಾಮಯ್ಯ ಜೊತೆಯಲ್ಲಿ ಬಂದಿದ್ದ ಅವರ ಪುತ್ರ ಡಾ. ಯತೀಂದ್ರ ಮತ್ತು ಸೊಸೆ ಸ್ಮಿತ ರಾಕೇಶ್ ಅವರಿಗೆ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗಿದ್ದು, ಸಿದ್ದರಾಮಯ್ಯ ಅವರಿಗೆ ಬಲಗೈ ಬೆರಳಿಗೆ ಶಾಯಿ ಹಾಕಲಾಗಿದೆ. ಮೈಸೂರು ನಗರದಿಂದ ಬೆಳಿಗ್ಗೆ 10 ಕ್ಕೆ ಸಿದ್ದರಾಮನಹುಂಡಿಗೆ ಆಗಮಿಸಿದ್ದ ಸಿದ್ದರಾಮಯ್ಯ ತಮ್ಮ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಸೊಸೆ ಸ್ಮಿತಾ ರಾಕೇಶ್ ಜತೆಗೂಡಿ ಮತದಾನ ಮಾಡಿದರು. ಜಾವಗಲ್ ಶ್ರಿನಾಥ್ ಕುವೆಂಪುನಗರದ ಜ್ಞಾನಗಂಗಾ ಶಾಲೆಯಲ್ಲಿ ಜಿಲ್ಲೆಯ ಚುನಾವಣಾ ರಾಯಭಾರಿ, ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ ಮಾಡಿದರು. ನಂತರ ಮಾತನಾಡಿ, ಎಲ್ಲೆಡೆ ಮತದಾನ ಪ್ರಕ್ರಿಯೆ ಚೆನ್ನಾಗಿ ಆಗುತ್ತಿದೆ. ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಹೇಳಿದರು ಬಾಕ್ಸ್…. ಜಿಲ್ಲಾವಾರು ಮತದಾನದ ವಿವರ: ಕೆ.ಆರ್ ಕ್ಷೇತ್ರ ಶೇ 56.80 ಚಾಮರಾಜ ಕ್ಷೇತ್ರ ಶೇ 69.70 ನರಸಿಂಹರಾಜ ಕ್ಷೇತ್ರ ಶೇ 70.58 ವರುಣ ಕ್ಷೇತ್ರ ಶೇ. ̇78.11 ಚಾಮುಂಡೇಶ್ವರಿ ಕ್ಷೇತ್ರ ಶೇ. 70;75 ನಂಜನಗೂಡು ಶೇ. 74.11 ಟಿ ನರಸೀಪುರ ಶೇ.74-10 ಕೆ ಆರ್ ನಗರ ಶೇ. 72.3 ಹುಣಸೂರು ಶೇ. 70..6 ಎಚ್ ಡಿ ಕೋಟೆ ಶೇ.72.11