ಸುದ್ದಿಮೂಲ ವಾರ್ತೆ
ತುಮಕೂರು, ಮೇ 12: ಜಿಲ್ಲಾ ಬಾಲಭವನ ವತಿಯಿಂದ 15 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಸದರಿ ಶಿಬಿರದಲ್ಲಿ ಕರಾಟೆ, ಚಿತ್ರಕಲೆ, ಕರಕುಶಲತೆ, ರಂಗ ಚಟುವಟಿಕೆ, ಸಮೂಹ ನೃತ್ಯ, ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್. ಶ್ರೀಧರ ತಿಳಿಸಿದರು.
ರಾಜ್ಯ ಬಾಲಭವನ ಸೊಸೈಟಿ ಹಾಗೂ ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಬಾಲಭವನ ಸಭಾಂಗಣದಲ್ಲಿ ಮೇ 8 ರಿಂದ ಮೇ 23ರವರೆಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಾಲೆಯಲ್ಲಿ ಪಠ್ಯ ಚಟುವಟಿಕೆಗೆ ಹೆಚ್ಚು ಒತ್ತು ನೀಡಿರುತ್ತಾರೆ. ಈ ಶಿಬಿರದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡಲಾಗುವುದು ಇದರಿಂದ ಮಕ್ಕಳಲ್ಲಿರುವ ವಿಶೇಷ ಕಲೆಯನ್ನು ಗುರುತಿಸಲು ಸಹಕಾರಿಯಾಗುತ್ತದೆ. ಮಕ್ಕಳು ಕರಾಟೆ ಕಲಿಯುವುದರಿಂದ ಸೆಲ್ಫ್ ಡಿಫೆನ್ಸ್ಗೆ ಸಹಕಾರಿಯಾಗುತ್ತದೆ ಹಾಗೂ ಮಕ್ಕಳಲ್ಲಿರುವ ವಿವಿಧ
ಪ್ರತಿಭೆಯನ್ನು ಗುರುತಿಸಲು ಈ ಬೇಸಿಗೆ ಶಿಬಿರ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.
ಬಡ ಮಕ್ಕಳು ಹಣ ಕೊಟ್ಟು ಬೇಸಿಗೆ ಶಿಬಿರಕ್ಕೆ ಹೋಗಲು ಕಷ್ಟವಾಗಿದ್ದು, ಅಂತಹ ಮಕ್ಕಳಿಗಾಗಿ ಉಚಿತವಾಗಿ ಬೇಸಿಗೆ ಶಿಬಿರವನ್ನು ಜಿಲ್ಲಾ ಬಾಲಭವನವು ಆಯೋಜಿಸಿದೆ. ಮಕ್ಕಳು ಓದಿನ ಜೊತೆಗೆ ಪಠ್ಯೇತರ
ಚಟುವಟಿಕೆಗಳಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಫಿಟ್ ಆಗುತ್ತಾರೆ.
ಬರೀ ಓದಿನಿಂದ ಮನಸ್ಸು ಸಮತೋಲನವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಮಕ್ಕಳಲ್ಲಿ 40 ನಿಮಿಷಕ್ಕಿಂತ ಹೆಚ್ಚಿನ ಅವಧಿ ಒಂದೇ ಚಟುವಟಿಕೆಯಲ್ಲಿ ಗ್ರಹಿಸುವ ಶಕ್ತಿ ಇರುವುದಿಲ್ಲ. ಆದ್ದರಿಂದ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕು. ಇತರೆ ಚಟುವಟಿಕೆಗಳಿಗೂ ಸಹ ಅವಕಾಶ ನೀಡಿ ಅದನ್ನು ಗುರುತಿಸಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ ಮಾತನಾಡಿ, ಶಾಲೆಯಲ್ಲಿ ಓದಿನ ಬಗ್ಗೆ ಹೇಳಿಕೊಡುತ್ತಾರೆ. ಮಕ್ಕಳಲ್ಲಿ ನೈತಿಕ ಶಿಕ್ಷಣ ಕಡಿಮೆ ಆಗುತ್ತಿದೆ. ಮಕ್ಕಳಿಗೆ ಚಿಕ್ಕಂದಿನಿAದಲೇ ನೈತಿಕ ಶಿಕ್ಷಣ
ನೀಡಬೇಕು. ಮಕ್ಕಳಲ್ಲಿ ಒಳ್ಳೆ ಗುಣಗಳನ್ನು ಬೆಳೆಸಬೇಕು. ಬಾಲಾಪರಾಧಗಳು ಜಾಸ್ತಿ ಆಗುತ್ತಿವೆ. ಪೋಷಕರು ಮಕ್ಕಳ ಬಗ್ಗೆ ಗಮನಹರಿಸಬೇಕು ಮತ್ತು ಅವರಿಗೆ ಸಮಯ ನೀಡಬೇಕು. ಈ ಶಿಬಿರದಲ್ಲಿ ಬಾಲಮಂದಿರದ ಮಕ್ಕಳಿಗೆ, ಸರ್ಕಾರಿ ಶಾಲಾ ಮಕ್ಕಳಿಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಈ ಶಿಬಿರದಲ್ಲಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಕಲ್ಯಾಣಾಧಿಕಾರಿ ಡಾ|| ರಮೇಶ, ಕರಾಟೆ ಸಂಪನ್ಮೂಲ ವ್ಯಕ್ತಿ ಪ್ರಕಾಶ್, ಚಿತ್ರಕಲೆ ಸಂಪನ್ಮೂಲ ವ್ಯಕ್ತಿ ಸೌಮ್ಯ, ರಂಗಚಟುವಟಿಕೆ
ಸAಪನ್ಮೂಲ ವ್ಯಕ್ತಿ ಕು. ಹಂಸಪ್ರಿಯ, ನೃತ್ಯ ಸಂಪನ್ಮೂಲ ವ್ಯಕ್ತಿ ಚೇತನ್, ಬಾಲಕರ ಬಾಲಮಂದಿರ ಮಕ್ಕಳು, ಬಾಲಕಿಯರ ಬಾಲಮಂದಿರ ಮಕ್ಕಳು, ಸರ್ಕಾರಿ ಶಾಲಾ ಮಕ್ಕಳು ಹಾಗೂ ವಿವಿಧ ಶಾಲೆಯ ಮಕ್ಕಳು, ಪೋಷಕರು ಹಾಜರಿದ್ದರು.