ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 12: ರಾಜ್ಯದಲ್ಲಿ ಚುನಾವಣೆ ಮುಗಿದ ಬೆನ್ನಲ್ಲೇ ಜನರಿಗೆ ವಿದ್ಯುತ್ ದರ ಏರಿಕೆಯ ಬಿಸಿ ಮುಟ್ಟಿಸಲಾಗಿದೆ.
ವಿದ್ಯುತ್ ದರ ಏರಿಕೆ
ಏಪ್ರಿಲ್ 1ರಿಂದ ಪೂರ್ವಾನ್ವಯ ಆಗುವಂತೆ ಪ್ರತಿ ಯೂನಿಟ್ಗೆ 70 ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ.
ಎಲ್ಲಾ ಎಸ್ಕಾಂಗಳು 1.46 ರೂ. ಹೆಚ್ಚಳ ಮಾಡುವಂತೆ ಕೆಇಆರ್ಸಿಯನ್ನು ಕೋರಿದ್ದವು. ಅಂತಿಮವಾಗಿ ಎಚ್ಟಿ ಹಾಗೂ ಎಲ್ಟಿ ಸಂಪರ್ಕಗಳ ಪ್ರತಿ ಯೂನಿಟ್ಗೆ 70 ಪೈಸೆ ಹೆಚ್ಚಳ ಮಾಡಲು ಅನುಮೋದನೆ ನೀಡಲಾಗಿದೆ.
ದರ ಹೆಚ್ಚಳದ ಮೂಲಕ 4,457.12 ಕೋಟಿ ರೂ.ಗಳಷ್ಟು ನಷ್ಟವನ್ನು ಸರಿದೂಗಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಗ್ರಾಹಕರ ಒಟ್ಟಾರೆ ಬಿಲ್ಗಳಲ್ಲಿ ಶೇ 8.31ರಷ್ಟು ಹೆಚ್ಚಳ ಆಗಲಿದೆ.