ಸುದ್ದಿಮೂಲ ವಾರ್ತೆ
ಆನೇಕಲ್, ಮೇ 14: ರಷ್ಯಾದಲ್ಲಿ ನಡೆದ ಮಾಸ್ಕೋ ವುಷು ಸ್ಡಾರ್ಸ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿದ್ದ ಕರ್ನಾಟಕದ ಆನೇಕಲ್ ಭಾಗದ ಎಂ ವಿ ಮಧು ಹಾಗೂ ಪಿ ನರೇಂದ್ರ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಒಂದು ಬೆಳ್ಳಿ ಎರಡು ಕಂಚಿನ ಪದಕಗಳನ್ನು ಗೆದ್ದಿದಿದ್ದಾರೆ.
ಪದಕ ಗೆದ್ದ ಕ್ರೀಡಾಪಟುಗಳಿಗೆ ಇಂದು ಆನೇಕಲ್ ತಾಲೂಕಿನ ದೊಮ್ಮಸಂದ್ರ ಖಾಸಗಿ ಹೋಟೆಲ್ನಲ್ಲಿ ಯುನಿಫಿಟ್ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಪದಕ ವಿಜೇತ ಮಾಸ್ಟರ್ ಸರವಣ ಅವರ ನೇತೃತ್ವದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಇನ್ನು ಗೆದ್ದ ಕ್ರೀಡಾಪಟುಗಳಿಗೆ ಸಿಹಿ ತಿನಿಸಿ ಅಭಿನಂದನೆಯನ್ನು ಸಲ್ಲಿಸಿದರು.
ಆನೇಕಲ್ ಹುಸ್ಕೂರು ಸಮೀಪದ ಮುಳ್ಳೂರು ಗ್ರಾಮ ಪ್ರತಿಭೆ ಎಂ.ವಿ. ಮಧು ರಷ್ಯಾದಲ್ಲಿ ನಡೆದ ಮಾಸ್ಕೋ ವುಷಾ ಸ್ಟಾರ್ಸ್ (ಮಾರ್ಷಲ್ ಆರ್ಟ್ಸ್) ಪಂದ್ಯದಲ್ಲಿ ಒಂದು ಬೆಳ್ಳಿ, ಎರಡು ಕಂಚಿನ ಪದಕ ತಂದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಭಿನಂದಿಸಿದ್ದರು.
ಇದಲ್ಲದೆ, ಎಂ.ವಿ. ಮಧು ನ್ಯಾಷನಲ್ ಗೋಲ್ಡ್ ಮೆಡಲಿಸ್ಟ್, ಒಲಂಪಿಕ್ ಗೋಲ್ಡ್ ಮೆಡಲಿಸ್ಟ್, ಮೂರು ಬಾರಿ ಸಿಎಂ ಪದಕ, ಎಂಟು ಬಾರಿ ರಾಜ್ಯ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಇದೇ ತಂಡದಲ್ಲಿರುವ ಪಿ.ನರೇಂದ್ರ ಅವರು ಸಹ ಎರಡು ಕಂಚಿನ ಪದಕಗಳನ್ನು ತಂದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಈ ವೇಳೆ ಮಾತನಾಡಿದ ಎಂ.ವಿ. ಮಧು, ಭಾರತದಿಂದ ಸ್ಪರ್ಧೆ ಮಾಡಿ ಗೆದ್ದಿರುವುದು ಖುಷಿ ತಂದಿದೆ. ಹೆಚ್ಚಿನ ರೀತಿಯಲ್ಲಿ ಯುವಜನಿಕರಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು ಅಂತ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಯುನಿಫಿಟ್ ಸಂಸ್ಥೆಯ ಸಂಸ್ಥಾಪಕರು ಅಂತಾರಾಷ್ಟ್ರೀಯ ಪದಕ ವಿಜೇತ ಮಾಸ್ಟರ್ ಸರವಣನ್ ಮತ್ತು ಬೆಂಗಳೂರು ಈಸ್ಟ್ ಜೋನ್ ವುಷು ಅಸೋಸಿಯೇಷನ್ ಅಧ್ಯಕ್ಷ ವಿನಯ್ ಕಿರಣ್ ರೆಡ್ಡಿ,
ಕರ್ನಾಟಕ ರಾಜ್ಯ ವುಷು ಅಸ್ಸೊಸಿಯೆಷನ್ ಪ್ರಧಾನ ಕಾರ್ಯದರ್ಶಿ ಅಶೋಕ್ ಡಿ ಮೊಕಾಶಿ, ಇಂಡಿಯನ್ ವುಷು ಅಸ್ಸೊಸಿಯೆಷನ್ ಕಾರ್ಯನಿರ್ವಹಣಾಧಿಕಾರಿ ಸುಹೇಲ್ ಅವರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.