ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ14: ಆನ್ಲೈನ್ ಡೆಲಿವರಿ ಮೂಲಕ ಡ್ರಗ್ಸ್ ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗೆ ಮಾರಟಮಾಡಲಾಗುತ್ತಿದ್ದ, 12000 ಕೋಟಿ ರೂ. ಮೌಲ್ಯದ ಡ್ರಗ್ಸ್ನ್ನು ವಶ ಪಡಿಸಿಕೊಳ್ಳಲಾಗಿದೆ.
ಬಂಧರಿನಲ್ಲಿ ವರ್ಗಹಿಸುತ್ತಿದ್ದ ಗಾಂಜವನ್ನು ಬೆಂಗಳೂರು ಎನ್ಸಿಬಿ ಜೋನಲ್ ಡೈರೆಕ್ಟರ್ ಅರವಿಂದನ್, ಎನ್ಸಿಬಿ ಡೆಪ್ಯುಟಿ ಡೈರೆಕ್ಟರ್ ಸಂಜಯ್ ಕುಮಾರ್ ಸಿಂಗ್ ನೇತ್ರತ್ವದಲ್ಲಿ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ನೇವಿ ಮತ್ತು ಎನ್ಎನ್ಸಿಬಿ ಜಂಟಿ ಕಾರ್ಯಾಚರಣೆಯಲ್ಲಿ ಆಪರೇಶನ್ ಸಮುದ್ರಗುಪ್ತ ಹೆಸರಲ್ಲಿ ಭಾರತದ ಸಮುದ್ರದಲ್ಲಿ ಕಾರ್ಯಚರಣೆ ನಡೆಸಲಾಗಿದ್ದು, ಇರಾನ್ ಮತ್ತು ಅಫ್ಘಾನಿಸ್ತಾನ್ನಿಂದ ಭಾರತದ ಕಡೆಗೆ ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ಬೋಟ್ನಲ್ಲಿದ್ದ ಗಾಜವನ್ನು ವಶಪಡಿಸಿಕೊಂಡಿದ್ದಾರೆ.
ಆನ್ ಲೈನ್ ಮೂಲಕ ಮಾರಟ ಮಾಡಲಾಗುತ್ತಿದ್ದ ಡ್ರಾಂಗ್ಸ್ ನ್ನು ಗಿಫ್ಟ್ ಪ್ಯಾಕ್ ಮಾಡಿ ಗ್ರಹಕರಿಗೆ ಕಳುಹಿಸಿಕೊಡುತ್ತಿದ್ದರು ಮತ್ತು ಪೂನಃ ಅದೇ ಬೋಕ್ಸ್ ಗೆ ಹಣವನ್ನು ತುಂಬಿ ಕಳುಹಿಸಲಾಗುತ್ತಿತ್ತು ಎಂದು ತಿಳಿಸಲಾಗಿದೆ.
ಈ ಪ್ರಕರಣದಲ್ಲಿ 19 ಮಂದಿಯನ್ನು ಬಂಧಿಸಿದ್ದರು. ಇವರಲ್ಲಿ 10 ಪೆಡ್ಲರ್ಗಳು ಕೇರಳದವರಾಗಿದ್ದರೇ, ಉಳಿದವರಲ್ಲಿ ಇಬ್ಬರು ನೈಜೀರಿಯಾ, ಐವರು ಕೋಸ್ಟ್ನವರಾಗಿದ್ದರು. ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯದ ತಲಾ ಒಬ್ಬರನ್ನು ಬಂಧಿಸಲಾಗಿದೆ.
ಇದೇ ಮಾದಲ ಬಾರಿ ಸೀಜ್ ಮಾಡಿರುವ ಅತಿದೊಡ್ಡ ಕಾರ್ಯಚರಣೆ ಆಗಿದೆ, ಕ್ರಿಸ್ಟಲ್ ಮಾದರಿಯಲ್ಲಿ ಇದ್ದ 2500 ಕೆಜಿ ಡ್ರಗ್ಸ್ನ್ನು ಒಟ್ಟು 134 ಚೀಲಗಳಲ್ಲಿ ತುಂಬಿ ತರಲಾಗಿತ್ತು.ಹಾಗೂ ಚೀಲಗಳ ಮೇಲೆ ಮೇಡ್ ಇನ್ ಪಾಕಿಸ್ತಾನ ಎಂಬ ಹೆಸರು ಮುದ್ರಿತವಾಗಿದೆ. ಸದ್ಯದ ಮಟ್ಟಿಗೆ ಆರೋಪಿಗಳ ಗುರುತು ಗೌಪ್ಯವಾಗಿಟ್ಟಿದ್ದು, ತನಿಖೆ ಮುಂದುವರೆಸಿದ್ದಾರೆ.