ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಮೇ 16: ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಂಜಿನಪ್ಪ (ಪುಟ್ಟು) ರವರಿಂದ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಂಜಿನಪ್ಪ (ಪುಟ್ಟು)ರವರು ಮನೆ ಬಾಗಿಲು ಎಲ್ಲವೂ ಸಹಾ ಓಪನ್ ಇರುತ್ತದೆ ಯಾರೋ ಜನಗಳಿಗೆ ಕೆಲಸ ಮಾಡುವಂತದ್ದು ಆಂಜಿನಪ್ಪ (ಪುಟ್ಟು )ಅವರನ್ನು ಮೆಚ್ಚಿ ಅವರ ಜೊತೆ ಇರುತ್ತೇವೆ ಅಂತವರಿಗೆ ಎಲ್ಲರಿಗೂ ಸಹಾ ನಮ್ಮದು ಸ್ವಾಗತ ಕಾಂಗ್ರೆಸ್ ಪಕ್ಷದವರು ಬರಬಹುದು ಜೆಡಿಎಸ್ ಪಕ್ಷದವರು ಬರಬಹುದು ಮತ್ತು ಬಿಜೆಪಿ ಪಕ್ಷದವರು ಸಹಾ ಬರಬಹುದು ಯಾರೇ ಬಂದರೂ ಸಹಾ ನಮ್ಮ ಮನೆ ಬಾಗಿಲು ಓಪನ್ ಇರುತ್ತದೆ ಜೊತೆಗೂಡಿ ಕೆಲಸ ಮಾಡುವಂಥದ್ದು ನಾವು ಮುಂದುವರಿಸಿಕೊಂಡು ಹೋಗುವಂತದ್ದಾಗುತ್ತದೆ ಬಹಳಷ್ಟು ಚುನಾವಣೆ ಹೋರಾಟ ಬಹಳಷ್ಟು ಸಮಸ್ಯೆಗಳು ಆಯಿತು ನೋವು ಚಿಂತನೆಗಳು ಅಪಮಾನಗಳು ಆಯ್ತು ಇವನ್ನೆಲ್ಲ ಸಹಿಸಿಕೊಂಡು ಬರುತ್ತಿದ್ದೇವೆ ನಮ್ಮನ್ನ ಎಲ್ಲೋ ಒಂದು ಕಡೆ ಸ್ವಚ್ಛವಾಗಿ ನನೋಡುವಂತಹದ್ದು ಮೂರನೇ ಸ್ಥಾನ ಅನ್ನುವುದು ನಾಲ್ಕನೇ ಸ್ಥಾನ ಅನ್ನೋವುದು ಅವರಿಗೆ ಯಾರು ವೋಟು ಹಾಕುತ್ತಾರೆ ಅವರ ಹತ್ತಿರ ಎಲ್ಲಿದ್ದಾರೆ ಲೀಡರ್ಸ್ ಹೀಗೆಲ್ಲಾ ಪ್ರಶ್ನೆಗಳು ನಮ್ಮ ಬೆನ್ನ ಹಿಂದೆ ಮಾತನಾಡುವಂತಹದ್ದು ಆಗುತ್ತ ಇತ್ತು ಅದಕ್ಕೆಲ್ಲವೊ ಸಹಾ ಮತದಾರರೇ ತಿರುಪನ್ನ ಕೊಟ್ಟಿದ್ದಾರೆ.
ನಾವಂತೂ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಮುಂದುವರಿಸುತ್ತೇವೆ ಪ್ರತಿಯೊಬ್ಬರು ಮತ ನೀಡುವಂಥವರಿಗೆ ಮತ್ತೆ ನೀಡಿದೆ ಇರುವಂತವರಿಗೆ ಎಲ್ಲರಿಗೂ ಸಹಾ ಸಮಾನವಾಗಿ ಕ್ಷೇತ್ರದ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಅದಕ್ಕೆ ಭವಿಷ್ಯಕ್ಕೆ ಶಿಡ್ಲಘಟ್ಟವನ್ನ ಅಭಿವೃದ್ಧಿ ಪಡಿಸುವಂತಹದ್ದು ಮತ್ತೆ ಜನರ ವಿಶ್ವಾಸವನ್ನು ಉಳಿಸಿಕೊಂಡು ಹೋಗುವಂತಹದ್ದು ನಮ್ಮ ಕೆಲಸ ಆಗಿರುತ್ತದೆ ಆ ನಿಟ್ಟಿನಲ್ಲಿ ನಾವು ಮುಂದುವರೆಯುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆನೂರು ದೇವರಾಜ್,ಆನಂದ್,ಅಪ್ಸರ ಪಾಷಾ,ಚಾಂದ್ ಪಾಷಾ ಮಳಮಾಚನಹಳ್ಳಿ ರಮೇಶ್, ಇನ್ನು ಮುಂತಾದವರು ಹಾಜರಿದ್ದರು.