ಸುದ್ದಿಮೂಲ ವಾರ್ತೆ
ತುಮಕೂರು, ಮೇ 16: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “ಹರ್ಬನ್ ಮ್ಯಾನೇಜ್ಮೆಂಟ್ ಅಂಡ್ ವಾಟರ್ ಕನ್ರ್ವರ್ಷನ್” ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿದೆ.
ಕಾರ್ಯಾಗಾರದಲ್ಲಿ ‘ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ನಗರಗಳು’ ವಿಷಯದ ಮೇಲೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪದವಿ ಮತ್ತು ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧಗಳನ್ನು ಬರೆದು ಜೂ.1ರೊಳಗಾಗಿ ಕಳುಹಿಸಬಹುದಾಗಿರುತ್ತದೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಬರೆಯಬಹುದಾಗಿದ್ದು, ಒಬ್ಬರು ಒಂದು ಭಾಷೆಯಲ್ಲಿ ಮಾತ್ರ ಪ್ರಬಂಧವನ್ನು ಬರೆಯಲು ಅವಕಾಶವಿರುತ್ತದೆ. ಒಂದು ವೇಳೆ ಎರಡೂ ಭಾಷೆಗಳಲ್ಲಿ ಬರೆದರೆ ಒಂದನ್ನು ಅಕಾಡೆಮಿಯ ವಿವೇಚನೆಯಂತೆ ಆಯ್ಕೆ ಮಾಡಿಕೊಂಡು ಮೌಲ್ಯಮಾಪನವನ್ನು
ಮಾಡಲಾಗುವುದು. ಪ್ರಬಂಧಗಳು ಸಾವಿರ ಮೀರುವಂತಿಲ್ಲ.
ಪ್ರಬಂಧದ ಜೊತೆಯಲ್ಲಿ ಕಾಲೇಜಿನ ಗುರುತಿನ ಚೀಟಿಯನ್ನು ಕಳುಹಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 3ಸಾವಿರ, ದ್ವಿತೀಯ ಬಹುಮಾನ 2 ಸಾವಿರ, ತೃತೀಯ ಬಹಮಾನ 1ಸಾವಿರ ನಗದು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಇ-ಸರ್ಟಿಫಿಕೇಟ್
ನೀಡಲಾಗುವುದು ಎಂದು ಕನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.