ಸುದ್ದಿಮೂಲ ವಾರ್ತೆ
ಬಸವಕಲ್ಯಾಣ,ಮೇ.17: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಅಣ್ಣನಿಂದ ಮಹಿಳೆಯೊಬ್ಬಳ ಕತ್ತು ಕೋಯ್ದು ಭೀಕರ ಕೊಲೆ ಮಾಡಿದ ಘಟನೆ ನಗರದ ತ್ರಿಪುರಾಂತನಲ್ಲಿ ನಡೆದಿದೆ.
ನಗರದ ತ್ರಿಪುರಾಂತ ನಿವಾಸಿ ಸಂಗೀತಾ ಶ್ರೀಧರ ಕಾಂಗೆ (35) ಕೊಲೆಯಾದ ಮಹಿಳೆ.
ಮಹಿಳೆ ಪತಿ ಅಣ್ಣನಾದ ಅಶೋಕ ಕಾಂಗೆ ಎನ್ನುವಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಶೌಚಾಲಯದಲ್ಲಿ ನೀರು ಹಾಕಲಿಲ್ಲ ಎನ್ನುವ ಕಾರಣಕ್ಕೆ
ಮದ್ಯದ ಅಮಲಿನಲ್ಲಿ ಇರುವ ಆರೋಪಿ ಅಶೋಕ ಹಾಗೂ ಸಂಗೀತಾ ನಡುವೆ ಜಗಳ ನಡೆದಿದ್ದು, ಜಗಳದ ವೇಳೆ ಹರಿತವಾದ ಆಯುಧದಿಂದ ಮಹಿಳೆ ಕತ್ತು ಕೋಯಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕೊಲೆಯಾದ ಮಹಿಳೆ ಗೃಹ ರಕ್ಷಕ ದಳದ ಸಿಬ್ಬಂದಿಯಾಗಿದ್ದು, ಆರೋಪಿ ಅಶೋಕ ನಗರಸಭೆಯಲ್ಲಿ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸುತಿದ್ದ. ಆಟೋ ಚಾಲಕನಾಗಿರುವ ಮಹಿಳೆ ಪತಿ ಮನೆಯಲ್ಲಿ ಇಲ್ಲದಿದ್ದಾಗ ಆರೋಪಿ ಅಶೋಕ ಮಹಿಳೆಯೊಂದಿಗೆ ಜಗಳ ತಗೆದು ಕೊಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಹುಮನಾಬಾದ ಎಎಸ್ಪಿ ಶಿವಾಂಸು ರಾಜಪುತ್, ಸಿಪಿಐ ರಘುವೀರಸಿಂಗ್ ಠಾಕೂರ, ಪಿಎಸ್ಐ ರೇಣುಕಾ ಉಡಗಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆಸಿದೆ.