ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಮೇ 18: ಯುವಕರು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ದೇಹದ ಸದೃಢತೆ ಹಾಗೂ ಮನಸ್ಸಿನ ಮೇಲೆ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದು ಗೋಪಾಲನ್ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷೆ ಸುನೀತಾ ಪ್ರಭಾಕರ್ ಹೇಳಿದರು.
ಕೆ.ಆರ್.ಪುರ ಸಮೀಪದ ಹೂಡಿಯ ಗೋಪಾಲನ್ ಸ್ಕೂಲ್ ಆಫ್ ಪ್ಲಾನಿಂಗ್ ಆರ್ಕಿಟೆಕ್ಚರ್ ಕಾಲೇಜಿನಲ್ಲಿ ಉದ್ಯಥಮ್ ಕ್ರೀಡಾ ಉತ್ಸವದಲ್ಲಿ ಮಾತನಾಡಿದರು.
ಪ್ರಸ್ತುತ ವಿದ್ಯಾರ್ಥಿಗಳು ಮೊಬೈಲ್ಗೆ ಅವಲಂಬಿತರಾಗಿ ಕ್ರೀಡೆ ಬಗ್ಗೆ ಆಸಕ್ತಿವಹಿಸುತ್ತಿಲ್ಲ. ಕ್ರೀಡಾ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಬುದ್ದಿಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಕ್ರೀಡೆ ಆಡುವುದರಿಂದ ದೇಹ, ಮನಸ್ಸು ಸದೃಢಗೊಳ್ಳುವುದರೆ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹೆಚ್ಚೆಚ್ಚು ಕ್ರೀಡೆಯಲ್ಲಿ ತೊಡಗಿಕೊಳ್ಳಿ ಎಂದು ಹೇಳಿದರು.
ಪ್ರಾಂಶುಪಾಲ ಡಾ.ವಿಮಲಸ್ವಾಮಿ ಮಾತನಾಡಿ, ಗೋಪಾಲನ್ ವಾಸ್ತುಶಿಲ್ಪ ಕಾಲೇಜಿನಲ್ಲಿ ನುರಿತ ಅನುಭವಿ ಶಿಕ್ಷಕರ ತಂಡ ಬೋಧನೆ ಮಾಡುತ್ತಿದೆ. ವಿದ್ಯರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಂಡು ಉತ್ತಮ ರೀತಿಯಲ್ಲಿ ಪ್ರರ್ಶನ ನೀಡಿದ್ದಾರೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಕೇಂದ್ರ ಮತ್ತು ರಾಜ್ಯ ರ್ಕಾರದಲ್ಲಿ ಕ್ರೀಡಾ ಕೋಟದಲ್ಲಿ ನೌಕರಿ ಗಿಟ್ಟಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ನಗರದ ಹದಿನೆಂಟಕ್ಕೂ ಹೆಚ್ಚು ವಾಸ್ತುಶಿಲ್ಪ ಕಾಲೇಜು ವಿದ್ಯರ್ಥಿಗಳು ಕ್ರೀಡೆ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಕ್ರಿಕೆಟ್, ಥ್ರೋ ಬಾಲ್, ಫುಟ್ಬಾಲ್, ಚೇಸ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಈ ಸಂರ್ಭದಲ್ಲಿ ಹಾಕಿ ಆಟಗಾರ್ತಿ ದೇವರಾಜಮ್ಮ, ಬಾಡಿ ಬಿಲ್ಡರ್ ಪಿಯುಷ್ ರಾಜಪುತ್, ಡೀನ್, ಕೆ.ವಿ.ಕೃಷ್ಣಮರ್ತಿ, ಡಾ. ಆನಂದ್ ಇದ್ದರು.