ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 19: ಎಸ್ಎಸ್ಎಲ್ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆನೇಕಲ್ನ ರಾಜ ಲಾಂಛನ ತಂಡದಿಂದ ಉಚಿತ ತರಬೇತಿ ನೀಡಲಾಗುತ್ತದೆ.
ಮೇ 21 ರಿಂದ ಆನೇಕಲ್ನಲ್ಲಿ ಓಂ ಮಾರುತಿ ಸ್ಟುಡಿಯೋ ಮೇಲ್ಭಾಗ ಇರುವ ಕಚೇರಿಯಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಈ ಕುರಿತು ಎಲ್.ವೈ. ರಾಜೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಎಸ್ಎಸ್ಎಲ್ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಕೇವಲ ಒಂದು ತಿಂಗಳ ತರಬೇತಿ ಅಷ್ಟೇ ಅಲ್ಲದೆ, ಮಕ್ಕಳಿಗೆ ಬೆಳಗ್ಗೆ ಚಹಾ ಬಿಸ್ಕತ್, ಮಧ್ಯಾಹ್ನ ಉಪಾಹಾರದ ವ್ಯವಸ್ಥೆ ಸಹ ಮಾಡಲಾಗಿದೆ. ಜೊತೆಗೆ ಮಕ್ಕಳಿಗೆ ಪುಸ್ತಕಗಳು, ಪೆನ್ನು, ಕಾರ್ಡ್ಬೋರ್ಡ್ ಶೀಟ್ ಸಹ ನೀಡಲಾಗುತ್ತದೆ ಎಂದು ವಿವರಿಸಿದರು.
ರಾಜಲಾಂಛನದ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಜಿಗಣಿ ಘಟಕದ ಅಧ್ಯಕ್ಷ ಗಣೇಶ, ಆನೇಕಲ್ ಘಟಕದ ಅಧ್ಯಕ್ಷ ಸೋಮಶೇಖರ್, ರಾಜಲಾಂಛನ ಕಾರ್ಯದರ್ಶಿ ಮಂಜುನಾಥ್ ನಂದಿಯವರು ಮಕ್ಕಳಿಗೆ ಈ ಎಲ್ಲಾ ತರಬೇತಿ ಮತ್ತು ಸೌಲಭ್ಯ ಒದಗಿಸಲು ಸಹಾಯ ಮಾಡಿದ್ದಾರೆ. ಈಗಾಗಲೇ ಈಗಾಗಲೇ 27 ಮಕ್ಕಳು ನೋಂದಣಿ ಮಾಡಿಕೊಂಡಿರುತ್ತಾರೆ ಇನ್ನು 33 ಮಕ್ಕಳಿಗೆ ಮಾತ್ರ ಪ್ರವೇಶವಿರುತ್ತದೆ.
ತರಬೇತಿಯಲ್ಲಿ ಭಾಗವಹಿಸುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು. ಮೊಬೈಲ್: 9036490418