ಸುದ್ದಿಮೂಲ ವಾರ್ತೆ
ಕೆಜಿಎಫ್, ಮೇ 20: ನಗರದ ಶಾಸಕರ ಕಚೇರಿಯಲ್ಲಿ ಶಾಸಕಿ ರೂಪಕಲಾ ಅವರಿಗೆ ಕೆಜಿಎಫ್ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಎಲ್.ಎನ್.ನರಸಿಂಹಮೂರ್ತಿ ಮಾತನಾಡಿ, ಎರಡನೇ ಬಾರಿಗೆ ಕೆಜಿಎಫ್ ಶಾಸಕಿಯಾಗಿ ರೂಪಕಲಾ ಶಶಿಧರ್ ಅವರು 50 ಸಾವಿರ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು. ತಾಲೂಕು ಕಟ್ಟಡ. ಆಸ್ಪತ್ರೆ ಕಟ್ಟಡ. ಜಿಲ್ಲಾ ಪಂಚಾಯತಿ ಕಟ್ಟಡ. ಎಲ್ಲಾ ರಸ್ತೆಗಳ ಅಭಿವೃದ್ಧಿ. ರಸ್ತೆ ದೀಪಗಳು. ಇನ್ನು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಶಾಸಕಿ ರೂಪಕಲಾ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗಲಿ. ಆಮೂಲಕ ಕೆಜಿಎಫ್ ನಗರವನ್ನು ಇನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿ. ಇದಕ್ಕೆ ಸರ್ಕಾರಿ ನೌಕರರ ಸಂಘ ಸಹಕಾರ ನೀಡುತ್ತದೆ ಎಂದರು.
ಎಂ. ರೂಪಕಲಾ ಮಾತನಾಡಿ, ನನ್ನ ಗೆಲುವಿಗೆ ಸಹಕರಿಸಿದ ಇಲ್ಲಿ ನೆರೆದಿರುವ ಎಲ್ಲಾ ಸರ್ಕಾರಿ ಸಂಘದ ಮತ್ತು ವೃಂದಗಳ ಪದಾಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿದರು.
ಶಿಕ್ಷಕರು ಎನ್ನುವುದು ಮೊದಲು ಅವರ ಜವಾಬ್ದಾರಿ ಶಾಲೆಯ ಮಕ್ಕಳು ವಿದ್ಯಾವಂತರಾಗಿ ಶಾಲೆಗೆ ಮೊದಲ ಸ್ಥಾನ ಪಡೆಯಬೇಕು ಎಂದು ಹಂಬಲಿಸುತ್ತಾರೆ. ಪೋಷಕರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದರ ಶಿಕ್ಷಕರು. ಇದನ್ನು ಯೋಚನೆ ಮಾಡುತ್ತಾರೆ. ಅದೇ ಅವರ ಗುಣ . ಚುನಾವಣೆ ಸಂದರ್ಭದಲ್ಲಿ ಶಿಕ್ಷಕರು ಹಗಲು ಇರಲು ಎನ್ನದೇ ಕಷ್ಟಪಟ್ಟಿದ್ದೀರಿ ಚುನಾವಣೆ ನಡೆಯಲು ನೀವೇ ಕಾರಣಕರ್ತರು. ಸರ್ಕಾರದ ವತಿಯಿಂದ ನಿಮಗೆ ನೀಡಬೇಕಾದ ಸೌಲಭ್ಯಗಳನ್ನು ನೀಡುವಂತೆ ನಾನು ಸದನದಲ್ಲಿ ಧ್ವನಿ ಎತ್ತಿ ನಿಮ್ಮ ಜೊತೆ ಇರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿನೋದ್ ಬಾಬು, ಸರ್ಕಾರಿ ಶಿಕ್ಷಕರ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ . ಎಸ್ .ಶ್ರೀನಿವಾಸ್ ಕಾರ್ಯದರ್ಶಿಗಳಾದ ರವಿಪ್ರಕಾಶ್. ಶ್ರೀನಿವಾಸ್ .ಮುಖಂಡರಾದ ಅ ಮು ಲಕ್ಷ್ಮಣ್ ನಾರಾಯಣ್ ಪದ್ಮನಾಭ ರೆಡ್ಡಿ ಹಲವಾರು ಮುಖಂಡರು ಭಾಗವಹಿಸಿದ್ದರು.