ಸುದ್ದಿಮೂಲವಾರ್ತೆ
ಕೊಪ್ಪಳ ಮೇ 24: ರೈತ ಹಾಗೂ ಕೃಷಿ ಕೂಲಿಕಾರರ ಮಕ್ಕಳಿಗೆ ಉಚಿತವಾಗಿ ಪದವಿ ಶಿಕ್ಷಣ ನೀಡುವುದಾಗಿ ಕೊಪ್ಪಳದ ಸೆಂಟ್ ಪಾಲ್ಸ್ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಬಸವರಾಜ ಸಂಕನಗೌಡರ ತಿಳಿಸಿದ್ದಾರೆ.
ಅವರು ಕೊಪ್ಪಳದ ಮೀಡಿಯಾ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಕಳೆದ ವರ್ಷದಿಂದ ಈ ಮಹಾವಿದ್ಯಾಲಯವು ಕೊಪ್ಪಳದಲ್ಲಿ ಆರಂಭವಾಗಿದ್ದು ವಾಣಿಜ್ಯ ವಿಷಯಗಳ ಕಾಲೇಜು ನಡೆಯುತ್ತಿದೆ.
ಕಳೆದ ಬಾರಿ 22 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆದು ಓದುತ್ತಿದ್ದಾರೆ. ಕಳೆದ 8 ಜನ ವಿದ್ಯಾರ್ಥಿಗಳು ಉಚಿತ ಪ್ರವೇಶ ಪಡೆದಿದ್ದಾರೆ. ಈ ವರ್ಷವೂ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರೈತ ಹಾಗು ಕೂಲಿಕಾರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಕಾಲೇಜಿಗೆ ಶೇ 90 ಕ್ಕಿಂತ ಅಧಿಕ ಪಡೆದವರುಗೆ ಹಾಗೂ ಮಂಗಳಮುಖಿಯರಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.
ಕಾಲೇಜಿನಲ್ಲಿ ಕಾಂಪಿಟೇಟಿವ್ ಪರೀಕ್ಷೆ ಏದುರಿಸುವ ಭವಿಷ್ಯದ ದೃಷ್ಠಿಯಿಂದ ಶಿಕ್ಷಣ ನೀಡಲಾಗುತ್ತಿದೆ. ವೀಕೆಂಡ್ ವಿಥ್ ಕಾಂಪಿಟೇಟಿವ್ ಎಕ್ಸಾಂ 25 ವಾರದಿಂದ ನಡೆಸಿಕೊಂಡು ಬರಲಾಗುತ್ತಿದೆ. ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಲಕ್ಷ್ಮಣ ಎಂ ಎಚ್. ಮಂಜುನಾಥ. ಮಂಜುನಾಥ ಹಿರೇಮಠ ಇದ್ದರು