ಸುದ್ದಿಮೂಲವಾರ್ತೆ
ಕೊಪ್ಪಳ ಮೇ 24: ಕೊಪ್ಪಳದಲ್ಲಿ ಸರಕಾರಿ ಉಪಕರಣಗಾರ ಹಾಗೂ ತರಬೇತಿ ಸಂಸ್ಥೆಯಿಂದ ಎರಡು ಕೋರ್ಸ್ ಗಳ ಶಿಕ್ಷಣ ನೀಡಲಾಗುವುದು. ಇಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗ ಖಾತ್ರಿ ನೀಡಲಾಗಿದೆ ಎಂದು ಸಹಾಯಕ ವ್ಯವಸ್ಥಾಪಕ ಮೌನೇಶ ರಾಠೋಡ ತಿಳಿಸಿದ್ದಾರೆ.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿ ಕೈಗಾರಿಕೆಗಳಲ್ಲಿ ದುಡಿಯುವ ಮಾನವ ಸಂಪನ್ಮೂಲ ವ್ಯಕ್ತಿಗಳನ್ನು ತಯಾರಿಸುವ ಉದ್ದೇಶ ಹೊಂದಲಾಗಿದೆ. ಕೊಪ್ಪಳದಲ್ಲಿ ಮೇಕಾಟ್ರಿನಿಕ್, ಟೋಲ್ ಮತ್ತು ಡೇ ಮೇಕಿಂಗ್ ಕೋರ್ಸ್ ಗಳಿವೆ. ಕೊಪ್ಪಳದಲ್ಲಿ ಆರಂಭವಾಗುತ್ತಿರುವ ಟಾಯ್ಸ್ ಕ್ಲಸ್ಟರ್ ಬೇಕಾಗುವ ತಂತ್ರಜ್ಞಾನ ಒದಗಿಸಲಾಗುವುದು.
ಮೂರು ವರ್ಷ ಕೋರ್ಸ್ ಇನ್ನೊಂದು ವರ್ಷ ಇಂಟರ್ ಶಿಪ್ ಕೋರ್ಸ್ ನೀಡಲಾಗುವುದು. ಅವರಿಗೆ ಶಿಷ್ಯವೇತನ ನೀಡಲಾಗುವುದು. ಇಲ್ಲಿಯ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಕೊಪ್ಪಳ ಜಿಲ್ಲೆಯ ಕಾರ್ಖಾನೆಗಳೊಂದಿಗೆ ಒಪ್ಪಂದ ಮಾಡಲಾಗುವುದು ಎಂದರು.
ಮೇ 31 ರವರೆಗೆ ಪ್ರವೇಶಕ್ಕೆ ಅವಕಾಶವಿದೆ. ಇಲ್ಲಿ ವಿದ್ಯಾರ್ಥಿನಿಯರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಚಾರ್ಯ ಪ್ರಭುರಾಜ. ಹಿರಿಯ ಸಿಬ್ಬಂದಿ ಅಂಜಿನಪ್ಪ. ಉಪನ್ಯಾಕ ಶೇಕ್ಷಾವಲಿ