ಸುದ್ದಿಮೂಲ ವಾರ್ತೆ
ಬಳಗನೂರು,ಮೇ 25: ಬಳಗನೂರು ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ದೀನ ಸಮುದ್ರ ಹಸಮಕಲ್ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಬುಧವಾರ ಸಾಯಂಕಾಲ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಸುಮಾರು 20 ಜನರ ಗುಂಪಿನ ಮೇಲೆ ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ 204120 ವಶಪಡಿಸಿಕೊಂಡು ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬುಧವಾರ ಸಾಯಂಕಾಲ ಪ್ರಕಾಶ್ ರೆಡ್ಡಿ ಡಂಬಳ ನೇತೃತ್ವದಲ್ಲಿ ರೇವಣಸಿದ್ದಪ್ಪ ರಮೇಶ ಆಫೀಸ್ ಕರಿಯಣ್ಣ ವೆಂಕಟೇಶ ಶಿವರಾಜ ಶಿವಪುತ್ರ ಮಂಜುನಾಥ ಮೌನೇಶ ಒಳಗೊಂಡ ಪೊಲೀಸ್ ತಂಡ ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಹಣ ಮತ್ತು ಇಸ್ಪೀಟ್ಎಲೆ ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.