ಸುದ್ದಿಮೂಲ ವಾರ್ತೆ
ಸೂಲಿಬೆಲೆ, ಮೇ 25: ದೃಶ್ಯ ಮಾಧ್ಯಮಗಳ ಹಾವಳಿಯಿಂದ ಗ್ರಾಮೀಣ ಭಾಗದ ಅನೇಕ ಕಲೆಗಳು ನಶಿಸಿಹೊಗುವ ಹಂತಕ್ಕೆ ತಲುಪಿವೆ. ಕಲೆಯನ್ನು ಉಳಿಸುವ ಹಾಗೂ ಕಲಾವಿದರನ್ನು ರಕ್ಷಿಸಿ ವೇದಿಕೆ ಕಲ್ಪಿಸಿಕೊಡುವ ಕೆಲಸ ನಮ್ಮಿಂದಾಗಬೇಕು ಕಲೆಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಠ್ ಹೇಳಿದರು.
ಸೂಲಿಬೆಲೆಯ ಚನ್ನಬೈರೇಗೌಡನಗರದ ಪಂಚದೇವಾಲಯದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಯುವಕರ ಸಂಘ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಂಯುಕ್ತ
ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘ ಸಂಸ್ಥೆಗಳ ಮೂಲಕ ಗ್ರಾಮೀಣ ಭಾಗದ ಹಿರಿಯ ಕಲಾವಿದರು ಹಾಗೂ ಕಿರಿಯ ಕಲಾವಿದರನ್ನು ಗುರುತಿಸಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ದಾನಿಗಳ ಮೂಲಕ ಅವರಿಗೆ ವೇದಿಕೆಯ ಜೊತೆಯಲ್ಲಿ ಜೋಳಿಗೆ ತುಂಬುವ ಕೆಲಸಕ್ಕೆ ಸಹಾಯಹಸ್ತ ಚಾಚಬೇಕು ಎಂದು ಹೇಳಿದರು.
ಹರಿಕಥ ವಿದ್ಯಾನ್ ಪೋಸ್ಟ್ ಶ್ರೀನಿವಾಸ ಮಾತನಾಡಿ, ಸಂಘ ಸಂಸ್ಥೆಗಳಮೂಲಕ ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಹಾಗೂ ಗೌರವ ನೀಡುವ ಮೂಲಕ ಕಲೆಯನ್ನು ಪಸರಿಸುವ ಕೆಲಸ ನೆಡೆಯಬೇಕು ಎಂದು ಹೇಳಿದರು.
ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳೀ ಗೋಪಿನಾಥ್ ಮಾತನಾಡಿ, ಕಲೆ ಜೀವಂತವಾಗಿ ಇಡುವ ಕೆಲಸ ಆಗಬೇಕು. ಪೌರಾಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಬೇಕು,ದೃಶ್ಯ ಮಾಧ್ಯಮಗಳಿಂದ ಗ್ರಾಮೀಣ ಜನತೆ ಅಂತರ ಕಾಯ್ದುಕೊಳ್ಳಬೇಕು. ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು ಎಂದರು.
ಬಿ.ಸಂತೋಷ್ ಮತ್ತು ತಂಡದಿಂದ ಸುಗಮ ಸಂಗೀತ, ಮುನಿಕದಿರಪ್ಪ ತಂಡದಿಂದ ಭಜನಾ ಕಾರ್ಯಕ್ರಮ, ಡಿ.ಎಂ.ರಘುಕುಮಾರ್ ಅವರಿಂದ ಜನಪದ ಸಂಗೀತ, ಪೋಸ್ಟ್ ಶ್ರೀನಿವಾಸ್ ರಿಂದ ರಂಗಗೀತೆಗಳ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು.