ಸುದ್ದಿಮೂಲವಾರ್ತೆ
ಕೊಪ್ಪಳ,ಮೇ 26:ಕೂಕನಪಳ್ಳಿಯಲ್ಲಿ ಜೆಸ್ಕಾಂ ಹಲ್ಲೆ ಮಾಡಲು ಸಿಬ್ಬಂದಿ ನನಗೆ ಹಾಗು ಮಕ್ಕಳಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದರಿಂದ ನಾಟಕ ಮಾಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಹಲ್ಲೆ ಮಾಡಿದ ಚಂದ್ರಶೇಖರಯ್ಯ ಹಿರೇಮಠರ ಪತ್ನಿ ಪಾರ್ವತಿ ಹೇಳಿದ್ದಾರೆ.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ನಮ್ಮ ಮನೆಯವರು ಹಲ್ಲೆ ಮಾಡಿದ್ದು ತಪ್ಪು ಆದರೆ ಅದರ ಹಿಂದೆ ಇರುವ ಸತ್ಯಾಸತ್ಯತೆ ಮರೆಮಾಚಲಾಗಿದೆ ಎಂದು ಹೇಳಿದರು.
ಮರ್ಯಾದೆಗೆ ಅಂಜಿ ನಾವು ಯಾರಿಗೆ ಹೇಳಿಲ್ಲ. ಆದರೆ ಮೂರು ವರ್ಷದ ಹಿನ್ನೆಲೆಯಲ್ಲಿ ಈಗ ಘಟನೆಯ ನಂತರ ನಾವು ಪೊಲೀಸ ಠಾಣೆಗೆ ದೂರು ನೀಡಲು ಹೋದರೆ ಮುನಿರಾಬಾದ್ ಪೊಲೀಸರು ನಿರಾಕರಿಸಿದ್ದಾರೆ. ಅದಕ್ಕಾಗಿ ಈಗ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೆ ದೂರು ನೀಡಲಾಗುವುದು ಎಂದರು.
ವಿಡಿಯೋದಲ್ಲಿರುವದನ್ನು ತಿರುಚಿ ಸತ್ಯಾಸತ್ಯತೆಯನ್ನು ತಿರುಚಲಾಗಿದೆ. ಲೈನ್ ಮೆನ್ ಗೆ 12 ಸಾವಿರ ರೂಪಾಯಿ ಹಣ ನೀಡಿ ಮೂರು ವರ್ಷವಾದರೂ ಮೀಟರ್ ನೀಡಿಲ್ಲ. ಮನೆಯಲ್ಲಿ ಕೇವಲ ಹೆಣ್ಮಕ್ಕಳಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಲ್ಲು ಪೂಜಾರ ತಿಳಿಸಿದ್ದಾರೆ.
ಸರಕಾರ ಗ್ಯಾರಂಟಿ ಘೋಷಣೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಈ ಪ್ರಕರಣದ ಹಿಂದೆ ವಿದ್ಯುತ್ ಬಿಲ್ ಗಾಗಿ ಅಲ್ಲ. ಈ ಕುರಿತು ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜ್ಯೋತಿ ಗೊಂಡಬಾಳ, ನಿರ್ಮಲ, ಗಿರೀಶ ಹಿರೇಮಠ ಇದ್ದರು