ಸುದ್ದಿಮೂಲ ವಾರ್ತೆ
ಸೂಲಿಬೆಲೆ, ಮೇ 26: ಗ್ರಾಮೀಣ ಭಾಗದಲ್ಲಿ ನಾನಾ ರೀತಿಯ ಕಲಾಪ್ರಕಾರಗಳಿದ್ದು ಅವಗಳನ್ನು ಜೀವಂತವಾಗಿಡಬೇಕಾದರೆ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ಯುವ ಮುಖಂಡ ಲೊಕೇಶ್ ಅಭಿಪ್ರಾಯಪಟ್ಟರು.
ಸೂಲಿಬೆಲೆ ಪಂಚದೇವಾಲಯಗಳ ಆವರಣದಲ್ಲಿ ಬುಧುವಾರ ಜೇನುಗೂಡು ರೂರಲ್ ಡೆವಲಪ್ಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ಮತ್ತು ಹಳ್ಳಿ ಸಂಸ್ಕೃತಿ ಕಲಾ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲೆಯನ್ನು ನಂಬಿ ಜೀವನ ಸಾಗಿಸುತ್ತಿರುವ ಕಲಾ ಕುಟುಂಬಗಳಿಗೆ ಸರ್ಕಾರವು ಪ್ರೋತ್ಸಾಹಿಸುವ ಜೊತೆಯಲ್ಲಿ ಗುರುತಿಸಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಆರ್ಥಿಲ ಸಬಲರಾಗಿ ಮಾಡಲು ಮುಂದಾಗಬೇಕು ಸಂಘ ಸಂಸ್ಥೆಗಳು ಸಹ ಕಲಾವಿದರಿಗೆ ಸಹಾಯ ಹಸ್ತ ನೀಡಬೇಕು ಎಂದರು.
ಯುವ ಮುಖಂಡರಾದ ರವಿಕುಮಾರ್ ಮಾತನಾಡಿ, ಹಳ್ಳಿ ಸಂಸ್ಕೃತಿ ಕಲಾ ಟ್ರಸ್ಟ್ ಹಾಗೂ ಜೇನುಗೂಡು ರೂರಲ್ ಡೆದಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿದ್ದು ಈ ಸಂಸ್ಥೆಗಳು ಸತತ ಮೂರು ವರ್ಷಗಳಿಂದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹಿಸುವ ಮೂಲಕ ಅವರಿಗೆ ಸಹಾಯ ಹಸ್ತ ಚಾಚಿವೆ ಈ ಸಂಸ್ಥೆಗಳ ಸೇವೆ ಅನನ್ಯ ಎಂದರು.
ಸೂಲಿಬೆಲೆ ಗ್ರಾಮಪಂಚಾಯತ್ ಉಪಾಧ್ಯಕ್ಷ ಮುನಿಕದಿರಪ್ಪ ಮಾತನಾಡಿ ಕಲೆ ನಶಿಸುವ ಹಂತ ತಲುಪಿದ್ದು ಇಂತಹ ಸಂಘ ಸಂಸ್ಥೆಗಳು ಕಲಾವಿದರಿಗೆ ವೇದಿಕೆ ನೀಡುವ ಮೂಲಕ ಕಲೆಯನ್ನು ಉಳಿಸುವ ಕೆಲಸ ಮಾಢಬಹುದು ಎಂದು ಹೇಳಿದರು.
ಸಂತೋಷ್ ತಂಡದ ವತಿಯಿಂದ ಸುಗಮ ಸಂಗೀತ, ದೇವನಾಯಕನಹಳ್ಳಿ ರಘುಕುಮಾರ್ ತಂಡದಿಂದ ಜನಪದ ಸಂಗೀತ, ವಳಗೆರೆಪುರ ಉತ್ತನಳ್ಳಪ್ಪ ತಂಡದಿಂದ ಭಕ್ತಿ ಗೀತಗಾಯನ ಕಾರ್ಯಕ್ರಮ, ಹರಿಕಥೆ
ವಿದ್ವಾನ್ ಪೋಸ್ಟ್ ಶ್ರೀನಿವಾಸ್ ತಂಡದ ವತಿಯಿಂದ ಹರಿಕಥ ಕಲಾಕ್ಷೇಪ ಕಾರ್ಯಕ್ರಮಗಳು ನೆಡೆದವು.