ಸುದ್ದಿಮೂಲವಾರ್ತೆ
ಕೊಪ್ಪಳ ಮೇ 27: ಮೂರನೇ ಶಾಸಕ ಹಾಗು ಸಚಿವರಾಗಿ ಅದೃಷ್ಠ ಖುಲಾಯಿಸಿದ ಶಿವರಾಜ ತಂಗಡಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಹ ಹಿನ್ನೆಲೆ ಇಂದು ಬೋವಿ ಸಮಾಜದಿಂದ ಸಂಭ್ರಮಾಚರಣೆ ಮಾಡಿದರು.
ಶಿವರಾಜ ತಂಗಡಗಿ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಸಂದರ್ಭದಲ್ಲಿಯೆ ಅವರ ಸಮಾಜದ ಯುವಕರು ಕೊಪ್ಪಳದ ಅಶೋಕ ವೃತ್ತದಲ್ಲಿ ಪಟಾಕಿ ಸಿಡಿಸಿ. ಸಿಹಿ ಹಂಚಿ ಸಂಭ್ರಮಿಸಿದರು.
ಬೋವಿ ಸಮಾಜಕ್ಕೆ ಸಚಿವ ಸ್ಥಾನ ನೀಡಿದ್ದು ಖುಷಿಯಾಗಿದೆ. ಬೋವಿ ಸಮಾಜದವರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ ಎಂದು ಖುಷಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಶಂಕರಪ್ಪ ಬೋವಿ, ನಿಂಗಪ್ಪ ಬೋವಿ, ಗಾಳೆಪ್ಪ ಬೋವಿ. ಉಡಚಪ್ಪ ಬೋವಿ ಸೇರಿದಂತೆ ಹಲವರು ಇದ್ದರು.