ಸುದ್ದಿಮೂಲವಾರ್ತೆ
ಕೊಪ್ಪಳ, ಮೇ 29:ಮುಂದಿನ ದಿನಗಳಲ್ಲಿ ಸಚಿವ ವಂಚಿತರಿಗೆ ಅವಕಾಶ ನೀಡಲಿದ್ದಾರೆ ಎಂದು ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಅವರು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಮೂರು ಬಾರಿ ಆಯ್ಕೆಯಾದರೂ ಸಚಿವ ಸ್ಥಾನ ಸಿಗಲಿಲ್ಲ ಎಂಬುವದಕ್ಕೆ ಪ್ರತಿಕ್ರಿಯಿಸಿಬಹಳಷ್ಟು ಜನ ಮೂರು ಬಾರಿ ಗೆದ್ದಿದ್ದಾರೆ.
ಈಗ ಸಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ 34 ಜನರಿಗೆ ಅವಕಾಶ ನೀಡಲಾಗಿದೆ. 135 ಜನರಲ್ಲಿ ಬಹಳಷ್ಟು ಜನ ಹಿರಿಯ ಶಾಸಕರಿದ್ದಾರೆ. ಸಹಜವಾಗಿ ಮಂತ್ರಿಯಾಗಬೇಕೆನ್ನುವ ಆಸೆ ಇರುತ್ತೆ ಎಂದರು.
ಇದೇ ಸಂದರ್ಭದಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಬಾಕಿ ಇರುವ ಅಳವಂಡಿ, ಬಹದ್ದೂರು ಬಂಡಿ ಏತ ನೀರಾವರಿಯನ್ನು ಪೂರ್ಣಗೊಳಿಸಲಾಗುವುದು. ಒಟ್ಟಾರೆಯಾಗಿ ಕೊಪ್ಪಳದ ಸಮಗ್ರ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ನವರು ಹತಾಶೆ ರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ಘೋಷಿಸಿದ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಾರೆ.ಕಾಂಗ್ರೆಸ್ ಪಕ್ಷದ ಬಗ್ಗೆ ಜನರಿಗೆ ಭರವಸೆ ಇದೆ.ಹಿಂದಿನ ಸರಕಾರ ಕೋಮುವಾದ, ಭ್ರಷ್ಟಾಚಾರ ದಿಂದ ರಾಜ್ಯವನ್ನು ದಿವಾಳಿ, ಅಧೋಗತಿಗೆ ತಂದಿದ್ದಾರೆ.ಈಗ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತೆ ಎಂದು
ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.