ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ30: ರಾಜಧಾನಿಯಲ್ಲಿ ಮಳೆಯ ಅಬ್ಬರ ಜೊರಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹಲವು ಕಡೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ ಬಿಸಿಲ ಧಗಗೆ ಮಳೆರಾಯ ತಂಪೆರದಿದ್ದಾನೆ. ಅನೀರಿಕ್ಷಿತ ಮಳೆಯಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.
ಏಕಾಏಕಿ ಸುರಿದ ಧಾರಕಾರ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಪರದಾದುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗ್ಗೆ ವೇಳೆ ಸುಡು ಬಿಸಿಲಿನಿಂದ ಕೂಡಿದ್ದ ರಾಜಧಾನಿ ಮಧ್ಯಾನದ ವೇಳೆಗೆ ಮೊಡಕವಿದ ವಾತವರಣದಿಂದಾಗಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ರಾಜ್ಯದಲ್ಲಿ ಇನ್ನೂ ೩ ಗಂಟೆಗಳ ಕಾಲ ಮಳೆಯು ಮುಂದುವರೆಯಲಿದೆ ಎಂದುಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಲ್ಲೇಶ್ವರಂ, ಶಾಂತಿನಗರ, ಜಯನಗರ, ಕೆಆರ್ ಮಾರುಕಟ್ಟೆ, ವಿಜಯನಗರ, ಮೆಜೆಸ್ಟಿಕ್, ಬನಶಂಕರಿ, ಜೆಪಿನಗರ, ರಾಜಾಜಿನಗರ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ. ನಗರದ ತಗ್ಗು ಪ್ರದೇಶಗಳ ರಸ್ತೆಗಳು ಜಲಾವೃತಗೊಂಡಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡುವ ಪರಿಸ್ಥಿತಿನಿರ್ಮಾಣವಾಗಿದೆ. ಮೊಡಕವಿದ ವಾತವರಣ ನಿರ್ಮಾಣವಾಗಿ ಏಕಾಏಕಿ ಮಳೆ ಸುರಿದಿದೆ.
ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನಇಲಾಖೆ ಮುನ್ಸೂಚನೆ ನೀಡಿದೆ.