ಸುದ್ದಿಮೂಲ ವಾರ್ತೆ
ತಿಪಟೂರು, ಮೇ 30: ಮಕ್ಕಳು ಓದುವ ಜೊತೆಗೆ ಗ್ರಾಮೀಣ ಕ್ರೀಡೆಗಳು ಗ್ರಾಮೀಣ ಭಾಗದ ಹವ್ಯಾಸಗಳನ್ನು ತೊಡಗಿಸಿಕೊಂಡರೆ, ಮಕ್ಕಳ ಮನಸ್ಸು ಕ್ರಿಯಾಶೀಲತೆಯಿಂದ ಕೂಡಿದ್ದು ಸದಾ ಆತ್ಮವಿಶ್ವಾಸದ ಬೆಳೆಯಲು ಸಾಧ್ಯ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಿನಾಥ್ ತಿಳಿಸಿದರು.
ಮತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಂಟರಿಂದ ಹದಿಮೂರನೇಯ ವಯಸ್ಸಿನ ಮಕ್ಕಳಿಗೆ ಮತ್ತಿಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಬೇಸಿಗೆ ಶಿಬಿರದ ಸಮರೋಪ ಕಾರ್ಯಕ್ರಮವನ್ನು ಉದ್ದೇಶಿಸಿ
ಮಾತನಾಡಿದರು.
ಮಕ್ಕಳು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಪರಿಚಯಿಸಿದಾಗ ಮಕ್ಕಳ ಬೆಳವಣಿಗೆಗೆ ಸಾಧ್ಯವಾಗುತ್ತದೆ ಎಂದರು.
ಗ್ರಂಥಪಾಲಕರಾದ ಲೋಕೇಶ್ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಓದುವ ಹವ್ಯಾಸ, ಸಾಮಾಜಿಕ ಜವಾಬ್ದಾರಿ, ಅಂಕಿ-ಅAಶಗಳ ಬಗ್ಗೆ, ನೈತಿಕತೆ ಮತ್ತು ನಾಯಕತ್ವ ಗುಣದ ಬಗ್ಗೆ, ವಿಜ್ಞಾನಿಗಳ ಸಂಶೋಧನೆಗಳ ಬಗ್ಗೆ ವಿವರಣೆಯನ್ನು ನೀಡಿ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶ್ನಾವಳಿಯನ್ನು ನಡೆಸಿದರು.
ಶಿಬಿರದಲ್ಲಿ ಗ್ರಾ ಪಂ ಅಧ್ಯಕ್ಷ ಲೋಕೇಶ್ ಆದ್ಯಕ್ಷತೆವಹಿಸಿದ್ದು, ಗ್ರಾ ಪಂ ಸದಸ್ಯ ರೇಣುಕಮ್ಮ, ವಸಂತಕುಮಾರಿ, ಲೆಕ್ಕಸಹಾಯಕಿ ಶ್ವೇತಾ, ಮುಖ್ಯಶಿಕ್ಷಕ ಶಶಿಧರ್, ಶಿಕ್ಷಕ ದಿವಾಕರ್, ಸಂಪನ್ಮೂಲ ವ್ಯಕ್ತಿ ಯಶವಂತ್, ಭೂಮಿಕಾ, ರಶ್ಮಿ, ಶಾಲಾ ಮಕ್ಕಳು, ಸಿಬ್ಬಂದಿವರ್ಗ ಹಾಗೂ ಮುಂತಾದವರು ಹಾಜರಿದ್ದರು.