ಸುದ್ದಿಮೂಲವಾರ್ತೆ
ಕೊಪ್ಪಳ ಮೇ 31: ಕಳೆದ ಎರಡು ತಿಂಗಳಿನಿಂದ ಬೇಸಿಗೆ ರಜೆಯಲ್ಲಿದ್ದ ಶಾಲಾ ವಿದ್ಯಾರ್ಥಿಗಳು ಇಂದು ಮತ್ತೆ ಶಾಲೆಗೆ ಬಂದಿದ್ದಾರೆ. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಭವ್ಯವಾಗಿ ಸ್ವಾಗತಿಸಿದರು.
ಕಳೆದ ಮೂರು ವರ್ಷ ಕೊವಿಡ್ ಕಾರಣಕ್ಕಾಗಿ ಶಾಲೆಗಳು ಆರಂಭವಾಗಿದ್ದು ಕೊವಿಡ್ ಆತಂಕದಲ್ಲಿ ಆದರೆ ಈ ವರ್ಷ ಕೊವಿಡ್ ಆತಂಕವಿಲ್ಲ. ಸಕಾಲಕ್ಕೆ ಶೈಕ್ಷಣಿಕ ವರ್ಷ ಆರಂಭವಾಗಿದ್ದು. ಮೇ 31 ರಂದು ರಾಜ್ಯದಾದ್ಯಂತ ಶಾಲೆಗಳು ಆರಂಭವಾದವು. ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕರು ಭವ್ಯವಾಗಿ ಸ್ವಾಗತಿಸಿದರು.
ಕೊಪ್ಪಳದ ಗಡಿಯಾರ ಕಂಬದ ಬಳಿ ಇರುವ ಸರಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಶಾಲೆಗೆ ತಳಿರು ತೊರಣ ಕಟ್ಟಿದ್ದರು. ಶಾಲಾ ಆವರಣದಲ್ಲಿ ರಂಗೋಲಿ ಬಿಡಿಸಿ ಮಕ್ಕಳ ಸಂತೋಷದಿಂದ ಶಾಲೆಗೆ ಬರುವಂತೆ ಆಹ್ವಾನಿಸಿದರು.
ಶಾಲಾ ಶಿಕ್ಷಕರು ಇಂದು ತಮ್ಮ ಶಾಲೆಗೆ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ. ಬ್ಲಾಕ್ ಶಿಕ್ಷಣಾಧಿಕಾರಿ ಶಂಕರಯ್ಯ, ಅಕ್ಷರ ದಾಸೋಹ ಯೋಜನಾಧಿಕಾರಿ ಅನಿತಾ ಸೇರಿದಂತೆ ವಿವಿಧ ಆಧಿಕಾರಿಗಳನ್ನು ಆಹ್ವಾನಿಸಿದ್ದರು.
ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪುಷ್ಪಾಚರಣೆ ಮಾಡಿ ಹೂವುಗುಚ್ಛ ನೀಡಿದರು. ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಮೊದಲು ದಿನವೇ ಪುಸ್ತಕ ಹಾಗು ಸಮವಸ್ತ್ರ ನೀಡಿದರು. ಈ ವರ್ಷದಿಂದ ಆರಂಭವಾದ ಶಾಲೆಯು ಚೆನ್ನಾಗಿ ನಡೆದ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದರು.