ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.01: ಇವರಿಬ್ಬರು ಒಂದೇ ಭಾಷೆಯವರಲ್ಲ. ಇಂದು ಎಲ್ಲಾ ಅಂಗಗಳು ಸರಿ ಇದ್ದ ವಧುವನ್ನು ಮದುವೆಯಾಗಲು ಮೀನಾಮೇಷ ಎಣಿಸುತ್ತಿದ್ದಾರೆ.
ಈ ಸಂದರ್ಭ ಪಶ್ಚಿಮ ಬಂಗಾಳ ಮೂಲದ ದೃಷ್ಠಿ ಹೀನಳನ್ನು ಯುವಕನ್ನೊಬ್ಬ ಇಂದು ಸರಳವಾಗಿ ಮದುವೆಯಾಗಿದ್ದಾನೆ. ಈ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ.
ಕೊಪ್ಪಳ ಮೂಲದ ವ್ಯಾಪಾರ ವೃತ್ತಿ ಮಾಡುವ ಮಂಜುನಾಥ ಶ್ರೇಷ್ಠಿ ಎಂಬ ಯುವಕ ಇಂದು ಕೊಪ್ಪಳದ ವಾಸವಿ ಕಲ್ಯಾಣ ಮಂಟಪದಲ್ಲಿ ಸ್ನೇಹಿತರು. ಬಂಧುಗಳ ಸಮ್ಮುಖದಲ್ಲಿ ಪೂಜಾ ಘೋಷ್ ಎಂಬ ಯುವತಿಯನ್ನು ಮದುವೆ ಮಾಡಿಕೊಂಡರು. ಪೂಜಾ ಘೋಷ್ ಮೂಲತಃ ಪಶ್ಚಿಮ ಬಂಗಾಳದವರು. ಆಕೆ ತಂದೆ ತೀರಿಕೊಂಡಿದ್ದಾರೆ. ಇನ್ನೂ ತಾಯಿ ಹಾಗು ಸಹೋದರ ಇದ್ದಾರೆ. ಸಹೋದರನಿಗೆ ಅನಾರೋಗ್ಯ ಇದೆ. ಈ ಮಧ್ಯೆ ಪೂಜಾ ಘೋಷ್ ರಿಗೆ ಕಳೆದ ನಾಲ್ಕು ವರ್ಷಗಳ ಹಿಂಗೆ ಟ್ಯೂಮರ್ ಆಗಿ ದೃಷ್ಠಿ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಕೆಯು ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿ ಇಲ್ಲಿಯೇ ಇದ್ದಾರೆ.
ಪೂಜಾರಿಗೆ ಮದುವೆ ಮಾಡಿಕೊಳ್ಳಲು ಯಾರು ಮುಂದೆ ಬರಲಿಲ್ಲ. ಮ್ಯಾಟರಮೊನಿಯಲ್ಲಿ ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಕೊಪ್ಪಳದ ಮಂಜುನಾಥ ಶ್ರೇಷ್ಠಿ ಅಂಗವಿಕಲೆಗೆ ಬಾಳು ಕೊಡುವುದಾಗಿ ತಮ್ಮ ಮಾಹಿತಿಯನ್ನು ಮ್ಯಾಟರಮೊನಿಯಲ್ಲಿ ಹಾಕಿದ್ದರು ಇಬ್ಬರು ಮಾತುಕತೆ ಮಾಡಿಕೊಂಡು ಕೊನೆಗೆ ಎಲ್ಲರೂ ಒಪ್ಪಿ ಇಂದು ಹಸೆಮಣೆ ಏರಿದ್ದಾರೆ.
ಈ ಮಧ್ಯೆ ತಾಯಿಗೆ ಮಗಳು ಕೊಪ್ಪಳದಲ್ಲಿಯ ವರನ ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ ಮಗಳು ಒಪ್ಪಿಕೊಂಡವನನ್ನು ತಿರಸ್ಕರಿಸುವ ಧೈರ್ಯವೂ ಇರಲಿಲ್ಲ. ಈ ಕಾರಣಕ್ಕೆ ಬುಧುವಾರ ಆಕೆಯನ್ನು ಮಂಜುನಾಥ ಶ್ರೇಷ್ಠಿ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಅಪರೂಪದ ಮದುವೆಯನ್ನು ವರನ ಕಡೆಯುವರು ಇಂದು ಮದುವೆ ಮಾಡಿಸಿದ್ದಾರೆ.
ಋಣಾನುಬಂಧ ಎಂಬುವುದು ಇದೇ. ಎಲ್ಲಿಯೂ ಹುಟ್ಟಿ ಎಲ್ಲಿಯೋ ಬೆಳೆದಿರುವ ಯುವತಿ ಇಂದು ಕೊಪ್ಪಳದಲ್ಲಿ ಮದುವೆಯಾಗಿದ್ದಾಳೆ. ಮಂಜುನಾಥನ ಮಾನಸಿಕ ಧೋರಣೆಗೆ ಸ್ನೇಹಿರತರು ಬಂಧುಗಳು ಮೆಚ್ಚುಗೆ ಪಡೆದಿದ್ದಾರೆ.