ಮೈಸೂರು,ಜೂ.2:ಕೇಂದ್ರ ಸರ್ಕಾರದ ಅನುಧಾನದಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ರನ್ ವೇ ಯನ್ನು ವಿಸ್ತರಿಸಲು ಮುಂದಾಗಿದ್ದೇವೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿಗಳೋಡನೆ ಚರ್ಚೆ ನಡೆಸಿ ನಂತರ ಸುದ್ದಿಗರರೊಂದಿಗೆ ಮಾತಾನಾಡಿದ ಅವರು, ಮೈಸೂರು ವಿಮಾನ ನಿಲ್ದಾಣಕ್ಕೆ ಮೂಲಭೂತ ಸೌಕರ್ಯ ಹಾಗೂ ಉನ್ನತಿಕರಣಗೊಳಿಸಲು ಪ್ರಾಧಿಕಾರ ಮುಂದಾಗಿದೆ, ಈ ಹಿನ್ನೆಲೆ ರಾಷ್ಟ್ರೀಯ ವಿಮನಗಳು ಹೆಚ್ಚು ಹಾರಾಟ ಮಾಡುವುದರಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು 1.75 ಕಿ ಮಿ ನಿಂದ 2.75 ಕಿಮೀ ವಿಸ್ತರಿಸಲು ಮುಂದಾಗಿದ್ದೇವೆ.
ಮೈಸೂರು ನಂಜನಗೂಡು ಕೆಲ ಸೇತುವೆ ರದ್ದು ಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿಯಲ್ಲಿ ಮೈಸೂರು -ನಂಜನಗೂಡು ರಸ್ತೆಯನ್ನು ವಿಮಾನ ನಿಲ್ದಾಣ ವ್ಯಾಪ್ತಿಯಿಂದ 7 ಕಿ ಮೀ ವಿಸ್ತರಿಸಿ ಸಂಚಾರಿಸಲು 510 ಕೋಟಿ ಹಣವನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಷ್ಟ್ರೀಯ ಹೆದ್ದಾರಿಗೆ ನೀಡಲಾಗುತ್ತಿದೆ, ಇದರಿಂದ ಮೈಸೂರು – ನಂಜನಗೂಡು ಸುಗಮ ಸಂಚಾರ ಹಾಗೂ ವಿಮಾನ ನಿಲ್ದಾಣದಲ್ಲಿ ರನ್ ವೇ ವಿಸ್ತರಣೆಗೂ ಅನುಕೂಲವಾಗಲಿದೆ.
ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ಹೆಚ್ಚಾಗಿ ಉಂಟಾದಾಗ ಆಗುತ್ತಿರುವ ಅನಾನುಕುಲವನ್ನು ಸರಿಪಡಿಸಲು ಮುಂದಾಗಿದ್ದೇವೆ.
ಎರಡು ಬದಿಯ ಸುರಕ್ಷತಾ ತಂತಿ ಬೇಲಿಯನ್ನು ಯಾರು ಸಂಚಾರಿಸಬಾರದು ಎಂದು ಅಳವಡಿಸಲಾಗಿದೆ. ಆದರೆ ಕಳುವು ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಅವಘಡಗಳು ನಡೆಯದಂತೆ ಸ್ಥಳೀಕರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯತೆ ಇದೆ ಎಂದು ತಿಳಿಸಿದರು.