ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.2: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ನೀಡುವುದಿಲ್ಲ ಎಂಬ ವರದಿಯಾಗಿದೆ. ಈ ಬಗ್ಗೆ ಸಂಸದ ಸಂಗಣ್ಣ ಕರಡಿ ಕೇಳಿದರೆ ಪಕ್ಷದ ನಿರ್ಧಾರಕ್ಕೆ ಬದ್ದ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಆದರೆ ಸಕ್ರೀಯ ರಾಜಕೀಯದಲ್ಲಿರುತ್ತೇನೆ ಎಂದಿದ್ದಾರೆ.
ಇಂದು ಮಾಧ್ಯಮಗಳಲ್ಲಿ ಬಿಜೆಪಿಯ 12 ಜನ ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎಂಬ ವರದಿ ಪ್ರಸಾರವಾಗಿವೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯ ಸಂಗಣ್ಣ ಕರಡಿಗೂ ಸಹ ಟಿಕೆಟ್ ಇಲ್ಲ ಎಂಬ ವರದಿ ಇದೆ.ಇದಕ್ಕೆ ಪ್ರತಿಕ್ರಿಯಿಸಿದ ಅವರು ಪಕ್ಷದ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಅದನ್ನು ಸ್ವಾಗತಿಸುತ್ತೇನೆ.ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದವಾಗಿರುತ್ತೇನೆ ಎಂದರು.
ಇತ್ತೀಚಿಗೆ ಬಿಜೆಪಿ ಸಂಸದರ ಸಭೆ ಕರೆಯಲಾಗಿತ್ತು. ಆಗಲೂ ಈ ಬಗ್ಗೆ ಚರ್ಚೆಯಾಗಿಲ್ಲ.ಪಕ್ಷದವರು ನಮ್ಮ ಬಳಿ ಅದರ ಬಗ್ಗೆ ಏನು ಚರ್ಚೆ ಮಾಡಿಲ್ಲ. ಪಕ್ಷ ಒಂದು ವೇಳೆ ಸ್ಪರ್ಧಿಸಿ ಎಂದರೆ ಸ್ಪರ್ಧಿಸುವೆ, ಬೇಡ ಎಂದರೆ ಬಿಡುವೆ ಎಂದರು.
ಈಗ ನನ್ನದು ನಿವೃತ್ತಿ ವಯಸ್ಸು ಟಿಕೆಟ್ ಇಲ್ಲ ಎಂದಾಗ ರಿಟೈರ್ಡ್ ಆಗುತ್ತೇನೆ. ಸಕ್ರೀಯ ರಾಜಕಾರಣದಲ್ಲಿದ್ದು ನಮ್ಮ ಕೈಯಿಂದ ಏನು ಕೆಲಸ ಮಾಡಲು ಆಗುವುದು ಅದನ್ನು ಮಾಡುವೆ ಎಂದರು.
ಕಳೆದ 10 ವರ್ಷಗಳಿಂದ ಕೊಪ್ಪಳದ ಸಂಸದರಾಗಿರುವ ಸಂಗಣ್ಣ ಕರಡಿಗೆ ಈಗ 72 ವಯಸ್ಸು. ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ನಿಯಮವಿದೆ. ಈ ನಿಯಮ ಪಾಲನೆಯ ಹಿನ್ನಲೆಯಲ್ಲಿ ಸಂಗಣ್ಣರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಇದೆ.
2013 ರಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ನಂತರ 2014 ರಲ್ಲಿ ಸಂಗಣ್ಣ ಕರಡಿಗೆ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಕಳೆದ 2019 ರ ಚುನಾವಣೆಯಲ್ಲಿಯೂ ಅವರು ಜಯ ಗಳಿಸಿದ್ದಾರೆ. ಈ ಮಧ್ಯೆ 2018 ರಲ್ಲಿ ಮಗನಿಗೆ ಟಿಕೆಟ್. 2019 ರಲ್ಲಿ ತಮಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಬಿಜೆಪಿ ಸಂಗಣ್ಣರಿಗೆ ಮಣಿದು ಒಮ್ಮೆ ಮಗ ಅಮರೇಶ ಕರಡಿಗೆ . 2023 ರಲ್ಲಿ ಸೋಸೆ ಮಂಜುಳಾ ಕರಡಿಗೆ ಟಿಕೆಟ್ ಕೊಡಿಸಿದ್ದರು.
1978 ರಿಂದ ಸಕ್ರೀಯ ರಾಜಕೀಯದಲ್ಲಿರುವ ಸಂಗಣ್ಣ ಕರಡಿ ಈಗ ಚುನಾವಣಾ ನಿವೃತ್ತಿಯಾಗುವ ಹಂತಕ್ಕೆ ಬಂದಿದ್ದಾರೆ. ಪಕ್ಷ ಟಿಕೆಟ್ ನೀಡದಿದ್ದರೆ ರಾಜಕೀಯ ರಿಲೀಫ್ ಸಿಗುತ್ತದೆ ಎಂದು ಹೇಳಿದ್ದಾರೆ.