ಸುದ್ದಿಮೂಲವಾರ್ತೆ
ಕೊಪ್ಪಳ ಜೂ 03 :ಇಳಿವಯಸಲ್ಲೂ ಯುವಕರಂತೆ ಕೆಲಸ ನರೇಗಾ ಕೆಲಸ ಮಾಡುವ ಈ ವೃದ್ಧ ಕೂಲಿಕಾರನ ಸಾಹಸ ನೋಡಿದ್ರೆ ನೀವೇ ಅಚ್ಚರಿ ಆಗ್ತಿರಾ…
ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಲಿಕಾರರಾದ ಯಲಪ್ಪ ಹೂಗಾರ ಅವರಿಗೆ ವಯಸ್ಸು 68 ಆದರೆ, ಅವರ ಕೆಲಸ, ಕ್ರಿಯಾಶೀಲತೆ ಯುವಕರಂತೆ ಇದೆ. 68 ವಯಸ್ಸು, 7 ಮಕ್ಕಳು ಕಂಡಿರುವ ಯಲ್ಲಪ್ಪ ಹೂಗಾರ್ ಅವರಿಗೆ ಯಲ್ಲಪ್ಪ ಅವರೇ ಸರಿಸಾಠಿಯಾಗಿದ್ದಾರೆ. ನರೇಗಾ ಕೂಲಿಕಾರರಿಗೆ ಬೇಸರವಾದಾಗ ಯಲ್ಲಪ್ಪ ಅವರು ಹಂತಿಪದ ಹಾಡಿ ಮನರಂಜಿಸುತ್ತಾರೆ. ಇವರು ಗುದ್ದಲಿ, ಸಲಾಕೆ ಹಿಡಿದು ಕೆಲಸ ಮಾಡುತ್ತಾರೆ. ಕೆಲಸಕ್ಕೂ ಸೈ, ಹಾಡಿಗೂ ಸೈ.. ಎನ್ನುತ್ತಾರೆ.
ಇದಷ್ಟೆ ಅಲ್ಲ 68 ವಯಸ್ಸಾದರೂ ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿ ನಿಮಿಷಕ್ಕೂ ಹೆಚ್ಚು ಕಾಲ ನಿಂತು ಯುವಕರನ್ನೇ ನಾಚಿಸುತ್ತಾರೆ ಯಲ್ಲಪ್ಪ. ನರೇಗಾ ಕಾಮಗಾರಿ ಸ್ಥಳದಲ್ಲಿ ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿದ ಸಾಹಸ ನೋಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರವಿಶಾಸ್ತ್ರಿ ಹಾಗೂ ಎಲ್ಲ ಕೂಲಿಕಾರರು ಅವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಹೇರೂರು ಗ್ರಾಮದಲ್ಲಿ ನಿತ್ಯ ಕೂಲಿ ಕೆಲಸ ಮಾಡುತ್ತಾ, ಕೆಲಸ ಇಲ್ಲದಿದ್ದಾಗ ನರೇಗಾ ಕೆಲಸಕ್ಕೆ ಬಂದು ಎಲ್ಲರಂತೆ ಕೆಲಸ ಮಾಡುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡು ತನ್ನ ವಯಸ್ಸಿಗೆ ಸವಾಲು ಎಸೆದಿದ್ದಾರೆ ಯಲ್ಲಪ್ಪ ಹೂಗಾರ.