ಸುದ್ದಿಮೂಲವಾರ್ತೆ
ಕೊಪ್ಪಳ ಜೂ 05:ಕೊಪ್ಪಳ ನಗರದ ಪ್ರಮುಖ ವೃತ್ತವಾಗಿರುವ ಅಶೋಕ ವೃತ್ತ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಶತಮಾನದ ಹಿಂದೆ ಸ್ಥಾಪಿಸಿದ್ದ ಅಶೋಕ ವೃತ್ತವು ಈಗ ಅಭಿವೃದ್ದಿ ಕಾರ್ಯ ಆರಂಭವಾಗಿದೆ.
ಕೊಪ್ಪಳದ ಅಶೋಕ ವೃತ್ತ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ವೃತ್ತದಲ್ಲಿದೆ. ಈ ವೃತ್ತಕ್ಕೆ ರಕ್ಷಣೆ ಇಲ್ಲದೆ ವಾಹನಗಳ ಡಿಕ್ಕಿ ಹೊಡೆದು ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿಅಶೋಕ ವೃತ್ತ ಅಭಿವೃದ್ಧಿಗಾಗಿ ಹಲವು ಭಾರಿ ಹೋರಾಟ ನಡೆಸಲಾಗಿತ್ತು.
ಹೋರಾಟದ ಹಿನ್ನೆಲೆಯಲ್ಲಿ ಚುನಾವಣೆಯ ಮುನ್ನ ಅಶೋಕ ವೃತ್ತ ಅಭಿವೃದ್ದಿ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.ಚುನಾವಣೆಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭವಾಗಿರಲಿಲ್ಲ.ಚುನಾವಣೆಯ ನಂತರ ಈಗ ಅಭಿವೃದ್ದಿ ಕಾರ್ಯ ಆರಂಭವಾಗಿದೆ.
ಈಗಿರುವ ವೃತ್ತ ಸ್ತಂಭ ಸ್ಥಳಾಂತರ ಮಾಡಲಾಗುತ್ತಿದೆ.ರಾಷ್ಟ್ರ ಲಾಂಛನವನ್ನು ಸಹ ಸ್ಥಳಾಂತರ
ಸ್ಥಳಾಂತರ ವೇಳೆ ಅಗೌರವವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.ಸರಿಯಾದ ನಿಯಮವಿಲ್ಲ ಟ್ರಾಕ್ಟರ್ ನಲ್ಲಿ ಲಾಂಛನವನ್ನು ಗುತ್ತಿಗೆದಾರರು ತೆಗೆದುಕೊಂಡು ಹೋಗಿದ್ದಾರೆ.
1957 ಆಗಷ್ಟ 15 ರಂದು ವೃತ್ತವನ್ನು ಸ್ಥಾಪಿಸಲಾಗಿತ್ತು. ಈ ವೃತ್ತವನ್ನು 1856 ರಲ್ಲಿ ಪ್ರಥಮ ಸ್ವತಂತ್ರ ಹೋರಾಟಗಾರ ಹಮ್ಮಿಗಿ ಕೆಂಚನಗೌಡ ಹಾಗು ಮುಂಡರಗಿ ಭೀಮರಾಯ ಹೋರಾಟದ ನೆನಪಿಗಾಗಿ ವೃತ್ತವನ್ನು ಸ್ಥಾಪಿಸಲಾಗಿತ್ತು.