ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.7: ವಿದ್ಯುತ್ ದರದ ಹೆಚ್ಚಳವು ಕರ್ನಾಟಕದ ಕೈಗಾರಿಕೆ ಮತ್ತು ವ್ಯಾಪಾರ ಉದ್ಯಮವನ್ನು ತೊಂದರೆಗೀಡು ಮಾಡಿದೆ. ಅವರು ಈಗಾಗಲೇ ತಮ್ಮ ನಿಯಂತ್ರಣಕ್ಕೆ ಮೀರಿದ ಸ್ಥಳೀಯ ಮತ್ತು ಜಾಗತಿಕ ಅಂಶಗಳಿಂದ ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಎಫ್ಕೆಸಿಸಿಐ ಹೇಳಿದೆ.
“ಪ್ರಸ್ತುತ ತಿಂಗಳ ವಿದ್ಯುತ್ ಬಿಲ್ ಪ್ರತಿ ಯೂನಿಟ್ಗೆ 2.89 ರೂ.ಯಷ್ಟು ಹೆಚ್ಚಾಗಲಿದೆ. ಇದರ ಪರಿಣಾಮ ಉತ್ಪನ್ನಗಳು ಮತ್ತು ಸೇವೆಗಳ ಬೆಲೆ ಏರಿಕೆಯಾಗಲಿದ್ಥು, ಲಾಭದ ಪ್ರಮಾಣವನ್ನು ಕಡಿಮೆ ಮಾಡುತ್ತದೆ” ಎಂದು ಎಫ್ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ ಹೇಳಿದರು.
ಹಾಗಯೇ “ನಮ್ಮ ಸದಸ್ಯರಿಂದ ಬಂದ ಪ್ರತಿಕ್ರಿಯೆಯು, ಸೂಕ್ಷ್ಮ ಮತ್ತು ಸಣ್ಣ-ಪ್ರಮಾಣದ ಕೈಗಾರಿಕೆಗಳು ಹಾಗೂ ಕಿರು ಉದ್ಯಮಗಳಂತಹ ಕೆಲವು ದುರ್ಬಲ ವಿಭಾಗಗಳು ಹೆಚ್ಚಿನ ಖರ್ಚು ವೆಚ್ಚದಿಂದಾಗಿ ಬದುಕಲು ಸಹ ಕಷ್ಟಕರವಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ವಿದ್ಯುತ್ನಂತಹ ಪುನರಾವರ್ತಿತ ವೆಚ್ಚಗಳು ಹೆಚ್ಚಾದರೆ, ಅವರು ಅಂಗಡಿಯನ್ನು ಮುಚ್ಚುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಒತ್ತಾಯಿಸಬಹುದು. ಇತರ ನೆರೆ ರಾಜ್ಯಗಳ ಜೊತೆ ಕಾರ್ಯನಿರ್ವಹಿಸುವವರು, ಅಂತಹ ವೆಚ್ಚಗಳು ಕಡಿಮೆ ಇರುವ ಇತರ ರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಸಹ ಇದೆ.
ಆದ್ದರಿಂದ ನಾವು ಮೊದಲು ಕೈಗಾರಿಕೆ ಮತ್ತು ವ್ಯಾಪಾರದ ಪ್ರತಿನಿಧಿಗಳೊಂದಿಗೆ ಮಾತನಾಡಿ, ಅವರ ಪರಿಸ್ಥಿತಿಯನ್ನು ಅವಲೋಕಿಸಿ, ಸುಂಕದ ಪರಿಷ್ಕರಣೆಯಂತಹ ಸಮಸ್ಯೆಗಳನ್ನು ಪರಿಗಣಿಸುವಂತೆ ಸರ್ಕಾರಕ್ಕೆ ತೀವ್ರವಾಗಿ ಮನವಿ ಮಾಡುತ್ತೇವೆ. ಗೋಪಾಲ ರೆಡ್ಡಿ ತಿಳಿಸಿದರು.
ಜನರಿಗೆ ಭರವಸೆ ನೀಡಿದಂತೆ ಸರ್ಕಾರದ ಐದು ಕಲ್ಯಾಣ ಕ್ರಮಗಳಿಗೆ, ಕೈಗಾರಿಕೆ ಮತ್ತು ಉದ್ಯಮವು ವಿರುದ್ಧವಾಗಿಲ್ಲ ಎಂದು ಎಫ್ಕೆಸಿಸಿಐ ಹೇಳಿದೆ. ಆದರೆ ಹಣಕಾಸಿನ ವೆಚ್ಚದಲ್ಲಿ ಉಂಟಾಗುವ ಹೆಚ್ಚಳವು ತಮ್ಮ ಉಳಿವಿಗಾಗಿ ನಿರ್ವಹಿಸುತ್ತಿರುವ ಉದ್ಯಮದ ವೆಚ್ಚದ ಮೇಲೆ ಹೊರೆ ಬೀಳುವಂತೆ ಆಗಬಾರದು ಎಂದು ಎಚ್ಚರಿಸಿದೆ. ಉದ್ಯಮದ ಮೇಲಿನ ಯಾವುದೇ ಹೆಚ್ಚುವರಿ ಹೊರೆಯು, ಅಂಗಡಿಗಳನ್ನು ಮುಚ್ಚುವುದು, ತಮ್ಮ ಕಾರ್ಯಾಚರಣೆಗಳನ್ನು ಇತರ ರಾಜ್ಯಗಳಿಗೆ ಬದಲಾಯಿಸುವುದು ಅಥವಾ ಕಾರ್ಮಿಕರ ಸೇವೆಯನ್ನು ಕಡಿಮೆ ಮಾಡಿ ನಿರುದ್ಯೋಗಕ್ಕೆ ಉತ್ತೇಜನ ನೀಡುತ್ತದೆ ಎಂದು ಎಫ್ಕೆಸಿಸಿಐ ಹೇಳಿದೆ.