ಸುದ್ದಿಮೂಲ ವಾರ್ತೆ
ಸಿಂಧನೂರು,ಜೂ.7:ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ನಗರದ ವಾರ್ಡ್ ನಂ.22ರ ನಿವಾಸಿ ಶಿಲ್ಪಾ ಸಿದ್ದು ಗೊಂದಳಿ (27) ಮೃತ ದುದೈರ್ವಿ. ಮೃತ ಶಿಲ್ಪಾ ಅವರ ಪತಿ ಸಿದ್ದು ಭೀಮರಾವ್ ಗೊಂದಳಿ ಕೊಲೆ ಮಾಡಿರುವ ಆರೋಪಿ. ಇಬ್ಬರಿಗೂ ಮದುವೆಯಾಗಿ 10 ವರ್ಷವಾಗಿದೆ ಎನ್ನಲಾಗಿದೆ. ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯ ಪಿಐ ದುರುಗಪ್ಪ ಅವರು ಪ್ರಕರಣ ದಾಖಲಿಸಿಕೊಂಡು, ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ತರಲಾಗಿದೆ.