ತುಮಕೂರು, ಜೂ.8 : ಜಲಶಕ್ತಿ ಅಭಿಯಾನದ ಕೇಂದ್ರ ತಂಡವು ತುಮಕೂರು ಜಿಲ್ಲೆಯ ನಗರ, ತಾಲ್ಲೂಕು ಹಾಗೂ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಹಾಗೂ ಇತರೆ ಯೋಜನೆಗಳಡಿ
ಅನುಷ್ಠಾನಗೊಳಿಸಿರುವ ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳನ್ನು ವೀಕ್ಷಿಸಿದರು.
ಪ್ರಮುಖವಾಗಿ ಜಲಸಂರಕ್ಷಣಾ ಕಾಮಗಾರಿಗಳಾದ ಕೆರೆ-ಕಟ್ಟೆಗಳ ಅಭಿವೃದ್ಧಿ, ಮಳೆ ನೀರು ಸಂಗ್ರಹಣಾ ಕಾಮಗಾರಿ, ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಅಮೃತ ಸರೋವರ ಕಾಮಗಾರಿಯನ್ನು ಪರಿಶೀಲಿಸಿದರು.
ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರಹಳ್ಳಿ ಗ್ರಾಮದ
ಓಬಯ್ಯನಕಟ್ಟೆ ಅಮೃತ ಸರೋವರ ಕಾಮಗಾರಿ, ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿನ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ, ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಟ್ಲಗೊಲ್ಲಹಳ್ಳಿ ಗ್ರಾಮದ ಗುಂಡನಕಟ್ಟೆ ಅಭಿವೃದ್ಧಿ ಕಾಮಗಾರಿ, ಬುಕ್ಕಪಟ್ಟಣ ಗ್ರಾಮದ ದೊಡ್ಡಮ್ಮ ದೇವಿ ದೇವಾಲಯದ ಸಮೀಪ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ಸೇರಿದಂತೆ ತೀತಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಗನಪಾಳ್ಯ ಅಮೃತ ಸರೋವರ ಕಾಮಗಾರಿಯನ್ನು ವೀಕ್ಷಿಸಿದರು.
ಮದ್ಯಾಹ್ನದ ನಂತರ ತುಮಕೂರು ತಾಲ್ಲೂಕು ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಯ್ಯನಪಾಳ್ಯ
ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ನಿರ್ಮಿಸಿರುವ ಚೆಕ್ ಡ್ಯಾಂ ಕಾಮಗಾರಿ, ಹರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಣ್ಣೆಪಾಳ್ಯದಲ್ಲಿ ಅಮೃತ ಸರೋವರ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ತುಮಕೂರು ನಗರದ ಶೆಟ್ಟಿಹಳ್ಳಿ ಕೆರೆ, ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಿದ್ದ ಮಳೆ ನೀರು ಸಂಗ್ರಹಣಾ ಕಾಮಗಾರಿ ಹಾಗೂ ಅಮಾನಿಕೆರೆ ಕಾಮಗಾರಿಗಳನ್ನು ವೀಕ್ಷಿಸಿದರು.
ವಾಣಿಜ್ಯ ಸಚಿವಾಲಯದ ನಿರ್ದೇಶಕರು ಹಾಗೂ ಜಲಶಕ್ತಿ
ಅಭಿಯಾನದ ಕೇಂದ್ರ ನೋಡಲ್ ಅಧಿಕಾರಿ ಅಮಿತ್ ಕುಮಾರ್ ಅಗರವಾಲ್, ತುಮಕೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಸೇರಿದಂತೆ ಅಮೃತ ಸರೋವರ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆ. ಇದರಿಂದಾಗಿ ಸುತ್ತಮುತ್ತಲ ಪ್ರದೇಶಗಳು ಹಾಗೂ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಲಶಕ್ತಿ ಅಭಿಯಾನದ ತಾಂತ್ರಿಕ ಅಧಿಕಾರಿ ಹಾಗೂ ವಿಜ್ಞಾನಿ ಡಾ. ಸುಚೇತನ ಬಿಸ್ವಾಸ್,, ಅತೀಕ್ ಪಾಷ ಉಪ ಕಾರ್ಯದರ್ಶಿ (ಅಭಿವೃದ್ಧಿ), ಜಿಲ್ಲಾ ಪಂಚಾಯತ್,
ತುಮಕೂರು, ಸಹಾಯಕ ನಿರ್ದೇಶಕರು (ಗ್ರಾ.ಉ) ತುಮಕೂರು ತಾಲ್ಲೂಕು, ಎ.ಡಿ.ಪಿ.ಸಿ ನಂಜೇಗೌಡ, ಜಿಲ್ಲಾ ಐ.ಇ.ಸಿ., ಸಂಯೋಜಕರಾದ ಉಮೇಶ್ ಹುಲಿಕುಂಟೆ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ತಾಂತ್ರಿಕ ಸಿಬ್ಬಂದಿಗಳು ಹಾಜರಿದ್ದರು.