ಸುದ್ದಿಮೂಲವಾರ್ತೆ
ಕೊಪ್ಪಳ ಜೂ 08: ಮುಂಗಾರು ಮಳೆ ಬಾರದ ಛಾಯೆ ಆವರಿಸಿದ್ದ ಕೊಪ್ಪಳ ಜಿಲ್ಲೆಯಲ್ಲಿ ಇಂದು ಅಲ್ಲಲ್ಲಿ ಮಳೆಯಾಗಿದೆ. ಮೃಗಶಿರ ಮಳೆಯಾಗಿದ್ದು ಮುಂಗಾರು ಹಂಗಾಮು ಭರವಸೆ ಮೂಡಿಸಿದೆ. ಮೃಗಶಿರ ಮಳೆಯ ಸಂದರ್ಭದಲ್ಲಿ ನೀಡುವ ವನಸ್ಪತಿ ಔಷಧಿ ಪಡೆಯಲು ಬಂದವರು ಗಾಳಿ ಮಳೆಗೆ ತತ್ತರಿಸುವಂತಾಗಿದೆ.
ಮೇ ಹಾಗು ಜೂನ ಆರಂಭದಲ್ಲಿ ಆಗುತ್ತಿದ್ದ ಮಳೆಯು ಈ ಭಾಗಿ ಜೂನ ಎರಡನೆಯ ವಾರ ಆರಂಭವಾದರೂ ಮಳೆಯಾಗಿರಲಿಲ್ಲ ಇದರಿಂದಾಗಿ ಜನ ಮಳೆಗಾಗಿ ಮುಗಿಲು ನೋಡುತ್ತಿದ್ದರು. ರೋಹಿಣಿ ಮಳೆ ಮುಗಿದ ತಕ್ಷಣ ಇಂದು ಸಂಜೆ ವೇಳೆ ಯಾಗಿದೆ. ಕೊಪ್ಪಳ ನಗರ ಸೇರಿ ಅಲ್ಲಲ್ಲಿ ಮಳೆಯಾಗಿದ್ದು ಬಿಸಿಲಿನಿಂದ ಬಸವಳಿದವರಿಗೆ ತಂಪೇರಿದಿದೆ.
ಬಹಳ ದಿನಗಳಿಂದ ಮಳೆಗಾಗಿ ಕಾಯಿಯುತ್ತಿದ್ದ ಜನ ಹಾಗು ರೈತರಿಗೆ ಮೃಗಶಿರ ಮಳೆಯಾಗಿದ್ದು ಖುಷಿ ನೀಡಿದೆ ಮಳೆಯಿಂದಾಗಿ ಅಸ್ತಮಾಕ್ಕೆ ಔಷಧಿಯನ್ನು ಪಡೆಯಲು ಕುಟುಗನಹಳ್ಳಿಗೆ ಬಂದವರು ಪರದಾಡುವಂತಾಯಿತು.
ಪ್ರತಿವರ್ಷ ಮೃಗಶಿರ ಮಳೆ ಕೂಡುವ ವೇಳೆ ಕುಟುಗನಹಳ್ಳಿಯಲ್ಲಿ ಆಶೋಕರಾವ್ ಕುಲಕರ್ಣಿಯವರು ಅಸ್ತಮಾಕ್ಕಾಗಿ ಔಷಧಿ ನೀಡುತ್ತಾರೆ. ಇಲ್ಲಿಯ ವನಸ್ಪತಿ ಔಷಧಿ ಪಡೆಯಲು ರಾಜ್ಯದ ಮೂಲೆ ಮೂಲಿನಿಂದ ಸಾವಿರಾರು ಜನ ಬಂದಿದ್ದರು. ಈ ಭಾರಿ ರಾತ್ರಿ 11.45 ವೇಳೆ ಮಾತ್ರೆ ನುಂಗಲಿದ್ದಾರೆ. ಮಾತ್ರೆಗಾಗಿ ಬಂದಿರುವವರು ಬಿರುಗಾಳಿ ಹಾಗು ಮಳೆಯಿಂದ ತತ್ತರಿಸುವಂತಾಗಿತ್ತು.