ಸುದ್ದಿಮೂಲ ವಾರ್ತೆ
ರಾಯಚೂರು,ಜೂ.11:ರಾಯಚೂರಿಂದ ಏಮ್ಸ್ ಕಸಿಯುವ ಪ್ರಶ್ನೆ ಇಲ್ಲ, ಶೀಘ್ರವೇ ಸಂಪುಟದಲ್ಲಿ ಚರ್ಚಿಸಿ ಕೇಂದ್ರಕ್ಕೆ ರಾಯಚೂರು ಹೆಸರು ಶಿಫಾರಸು ಮಾಡುವುದಾಗಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೋರಾಟಗಾರರಿಗೆ ಭರವಸೆ ನೀಡಿದರು.
ಇಂದು ರಾಯಚೂರಿಗೆ ಆಗಮಿಸಿದ ಸಚಿವರಿಗೆ ಗೋಬ್ಯಾಕ್ ಹೋರಾಟದ ಹಿನ್ನೆಲೆಯಲ್ಲಿ ಏಮ್ಸ್ ಹೋರಾಟ ವೇದಿಕೆಗೆ ಸಚಿವರು ಆಗಮಿಸಿ ಹೋರಾಟಗಾರ ರೊಂದಿಗೆ ಮಾತನಾಡಿದರು.
ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 395 ನೇ ದಿನಕ್ಕೆ ಕಾಲಿಟ್ಟಿದೆ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಲೇಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಇಂದು ನಡೆದ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಬಸವರಾಜ ಕಳಸ ಮಾತನಾಡಿ, ತಾವು ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಲಬುರ್ಗಿಗೆ ಏಮ್ಸ್ ಮಂಜೂರು ಮಾಡಿಸುವುದಾಗಿ ಹೇಳಿ ನಮ್ಮ ಹೋರಾಟಕ್ಕೆ ಅಪಮಾನ ಮಾಡಿರುವಿರಿ, ರಾಯಚೂರು ಜಿಲ್ಲೆಯನ್ನು ಕಡೆಗಣಿಸಿರುವಿರಿ ಇದಕ್ಕೆ ನಮ್ಮ ಖಂಡನೆ ಇದೆ, ನೀವು ನಮ್ಮ ವೇದಿಕೆಗೆ ಬಂದು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
ಆ ಗೊಂದಲ ಈಗ ಬೇಡ ನಮ್ಮ ಪಕ್ಷ ಮತ್ತು ಸರಕಾರದ ನಿಲುವು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವುದು ಉದ್ದೇಶವಾಗಿದೆ ಆದಷ್ಟು ಶೀಘ್ರದಲ್ಲಿಯೇ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಶಿಫಾರಸ್ಸು ಮಾಡಿ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದಕ್ಕೆ ಮುನ್ನ ಸಚಿವರಿಗೆ ಘೇರಾವ್ ಮಾಡಲು ಮುಂದಾಗಿದ್ದ ವಿವಿಧ ಸಂಘಟನೆಯ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಯಚೂರು ಗ್ರಾಮೀಣ ಶಾಸಕ ಶ್ರೀ ದದ್ದಲ್ ಬಸನಗೌಡ ಕಾಂಗ್ರೆಸ್ ಮುಖಂಡ ಎ ವಸಂತ್ ಕುಮಾರ್ , ರಾಜಶೇಖರ್ ರಾಮಸ್ವಾಮಿ ಮತ್ತು ಹೋರಾಟ ಸಮಿತಿಯ ಅಶೋಕ್ ಕುಮಾರ್ ಜೈನ್ ಜಾನ್ ವೆಸ್ಲಿ ನರಸಪ್ಪ ಬಾಡಿಯಾಲ್ ಎನ್ ಮಹಾವೀರ್ ಕಾಮರಾಜ್ ಪಾಟೀಲ್ ಬಸವರಾಜ್ ಮಿಮಿಕ್ರಿ ವೀರಣ್ಣ ಶೆಟ್ಟಿ ಭಂಡಾರಿ ವಿನಯ್ ಚಿತ್ರಗಾರ ಉದಯ್ ಕುಮಾರ್ ಪ್ರಭು ನಾಯಕ್ ಬಸವರಾಜ್ ವೆಂಕಟರೆಡ್ಡಿ ದಿನ್ನಿ ಆರಿಫ್ ಮಿಯಾ ನೆಲಹಾಲ್ ರಾಜಶೇಖರ್ ಮಾಚರ್ಲ ಇಮ್ರಾನ್ ಬಡೇಸಾಬ್ ನಾಸಿರ ಹೊಸೂರ್ ಜಶವಂತರಾವ್ ಕಲ್ಯಾಣ ಕಾರಿ ಅಜೀಸ್ ಶ್ರೀನಿವಾಸ್ ಕಲಬಲ ದೊಡ್ಡಿ ಜೆಬಿ ರಾಜು ಮುಂತಾದವರು ಭಾಗವಹಿಸಿದ್ದರು.